ಜಿಲ್ಲೆಯಲ್ಲಿ 194 ಮದ್ಯದಂಗಡಿಗಳ ಸ್ಥಳಾಂತರ ಅನಿವಾರ್ಯ
ಸುಪ್ರೀಂಕೋರ್ಟ್ ಆದೇಶದ ಪರಿಣಾಮ
* ಒಟ್ಟಾರೆ 228 ಮದ್ಯ ಮಾರಾಟ ಕೇಂದ್ರಗಳಿವೆ.
್ಲ *ಶಿವಮೊಗ್ಗ ತಾಲೂಕಿನಲ್ಲಿ 92, ಭದ್ರಾವತಿಯಲ್ಲಿ 48, ಶಿಕಾರಿಪುರ 19 ಅಂಗಡಿಗಳಿವೆ.
*, ಸಾಗರ 24, ಸೊರಬ 14, ತೀರ್ಥಹಳ್ಳಿಯಲ್ಲಿ 18 ಹಾಗೂ ಹೊಸನಗರ ತಾಲೂಕಿನಲ್ಲಿ 13 ಮದ್ಯ ಮಾರಾಟ ಅಂಗಡಿಗಲಿವೆ.
* ಇದರಲ್ಲಿ 111 ವೈನ್ಶಾಪ್, 7 ಕ್ಲಬ್, 7 ಹೋಟೆಲ್-ಲಾಡ್ಜಿಂಗ್ ಸೇರಿವೆ.
* 58 ಬಾರ್ ಅಂಡ್ ರೆಸ್ಟೋರೆಂಟ್, 9 ಎಂಎಸ್ಐಎಲ್ ಹಾಗೂ ಇತರೆ 2 ಮದ್ಯ ಮಾರಾಟ ಕೇಂದ್ರಗಳು ಸ್ಥಳಾಂತರಗೊಳ್ಳಲಿವೆ.
ಶಿವಮೊಗ್ಗ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳ 500 ಮೀಟರ್ ವ್ಯಾಪ್ತಿಯೊಳಗಿರುವ ಎಲ್ಲ ಮದ್ಯದಂಗಡಿಗಳನ್ನು ಮುಚ್ಚುವಂತೆ ಸುಪ್ರೀಂಕೋರ್ಟ್ ನೀಡಿರುವ ಆದೇಶದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ 194 ಮದ್ಯದಂಗಡಿಗಳನ್ನು ಸ್ಥಳಾಂತರ ಮಾಡುವುದು ಅನಿವಾರ್ಯವಾಗಿದೆ. ಇದು ಮದ್ಯ ವ್ಯಾಪಾರಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಮದ್ಯ ಮಾರಾಟ ಕ್ಷೇತ್ರದಲ್ಲಿ ಭಾರೀ ದೊಡ್ಡ ಗೊಂದಲವೇ ಸೃಷ್ಟಿಯಾಗುವಂತೆ ಮಾಡಿದೆ.
ಜಿಲ್ಲೆಯಲ್ಲಿ ಒಟ್ಟಾರೆ 228 ಮದ್ಯ ಮಾರಾಟ ಕೇಂದ್ರಗಳಿವೆ. ಸುಪ್ರೀಂ ಕೋರ್ಟ್ ತೀರ್ಪಿನ ಪರಿಣಾಮದಿಂದ 194 ಕೇಂದ್ರಗಳನ್ನು ಸ್ಥಳಾಂತರ ಮಾಡಲೇಬೇಕಾಗಿದೆ. ಸುಪ್ರೀಂ ತೀರ್ಪಿನಂತೆ ಅಬಕಾರಿ ಇಲಾಖೆಯು ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ 500 ಮೀಟರ್ ವ್ಯಾಪ್ತಿಯಲ್ಲಿರುವ ಮದ್ಯದಂಗಡಿಗಳ ತೆರವಿಗೆ ಕ್ರಮಕೈಗೊಳ್ಳಲು ಮುಂದಾಗಿದೆ. ಈ ನಡುವೆ ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ 20 ಸಾವಿರಕ್ಕಿಂತ ಕಡಿಮೆ ಜನಸಂಖ್ಯೆಯಿರುವ ಪಟ್ಟಣ ಪ್ರದೇಶಗಳಲ್ಲಿ 500 ಮೀಟರ್ಗೆ ಬದಲಾಗಿ 220 ಮೀಟರ್ ಪರಿಮಿತಿಯನ್ನು ನಿಗದಿಪಡಿಸಿದೆ. ಈ ನಿಯಮ ಜಿಲ್ಲೆಗೆ ಅನ್ವಯವಾಗದಿರುವುದರಿಂದ ಮದ್ಯದಂಗಡಿಗಳಿಗೂ ರಿಯಾಯ್ತಿ ಲಭಿಸದಂತಾಗಿದೆ.
ಈ ಮೊದಲು ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದ್ದ ವೇಳೆಯೇ ಜಿಲ್ಲಾ ಅಬಕಾರಿ ಇಲಾಖೆಯು ಜಿಲ್ಲೆಯಲ್ಲಿ ಎಲ್ಲೆಲ್ಲಿ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳು ಹಾದು ಹೋಗಿವೆ ಎಂಬುವುದರ ಮಾಹಿತಿಯನ್ನು ಪಿಡಬ್ಲ್ಯೂಡಿ ಇಲಾಖೆಯಿಂದ ಪಡೆದುಕೊಂಡಿತ್ತು. ಈ ಮಾಹಿತಿಯ ಅನುಸಾರ ಜಿಲ್ಲಾ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ಅಂಗಡಿಗಳ ಸರ್ವೇ ಕಾರ್ಯ ನಡೆಸಿತ್ತು. ತೆರವುಗೊಳಿಸಬೇಕಾದ ಮದ್ಯದಂಗಡಿಗಳ ಪಟ್ಟಿ ಸಿದ್ದಪಡಿಸಿ ನೋಟೀಸ್ ಕೂಡ ನೀಡಿತ್ತು.
ಈ ನಡುವೆ ರಾಜ್ಯ ಸರ್ಕಾರವು ಸುತ್ತೊಲೆಯೊಂದನ್ನು ಹೊರಡಿಸಿ, ವೈನ್ಶಾಪ್ ಹಾಗೂ ಎಂಎಸ್ಐಎಲ್ ಮಾರಾಟ ಮಳಿಗೆಗಳನ್ನು ಮಾತ್ರ ಸ್ಥಳಾಂತರಿಸಬೇಕು ಎಂದು ಬೇರ್ಯಾವುದೇ ಸನ್ನದ್ದು ಸ್ಥಳಾಂತರಕ್ಕೆ ಕ್ರಮಕೈಗೊಳ್ಳಬಾರದು ಎಂದು ತಿಳಿಸಿತ್ತು. ಇದು ಅಬಕಾರಿ ಇಲಾಖೆ ಅಧಿಕಾರಿಗಳಲ್ಲಿ ಸಾಕಷ್ಟು ಗೊಂದಲ ಸೃಷ್ಟಿಸಿತ್ತು. ಮತ್ತೊಂದೆಡೆ ಬಾರ್ ಅಂಡ್ ರೆಸ್ಟೋರೆಂಟ್, ಕ್ಲಬ್, ಲಾಡ್ಜ್ - ಬೋರ್ಡಿಂಗ್ಗಳ ಮಾಲೀಕರು ನಿಟ್ಟುಸಿರು ಬಿಡುವಂತೆ ಮಾಡಿತ್ತು.
ಆದರೆ ಕಳೆದ ಶುಕ್ರವಾರ ಸುಪ್ರೀಂ ಕೋರ್ಟ್ ಹೊರಡಿಸಿರುವ ಹೊಸ ಆದೇಶವು ಎಲ್ಲ ಮದ್ಯ ಮಾರಾಟ ಸನ್ನದ್ದುಗಳನ್ನು ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳ ನಿಗದಿತ ಅಂತರದಿಂದ ತೆರವುಗೊಳಿಸಬೇಕಾಗಿರುವುದು ಅನಿವಾರ್ಯವಾಗಿದೆ.
ಒಟ್ಟಾರೆ ಸುಪ್ರೀಂ ಕೋರ್ಟ್ ಆದೇಶ ಜಿಲ್ಲೆಯ ಮದ್ಯ ಮಾರಾಟ ವಲಯದಲ್ಲಿ ತಲ್ಲಣ ಉಂಟುಮಾಡಿದೆ. ಬೇರೆಡೆ ಅಂಗಡಿಗಳ ಸ್ಥಳಾಂತರ ಮಾಡಲೇಬೇಕಾದ ಮದ್ಯದಂಗಡಿಗಳ ಮಾಲೀಕರು ಪರಿತಪಿಸುವಂತಾಗಿದೆ. ಅಂಗಡಿ ಸ್ಥಾಪನೆಗೆ ಸೂಕ್ತ ಸ್ಥಳಗಳ ಹುಡುಕಾಟದಲ್ಲಿ ತೊಡಗಿದ್ದಾರೆ.
-------------------------------------

No comments:
Post a Comment