Saturday, 11 June 2022

 

ªÉÆÃ¢AiÀÄ 8 ªÀµÀð, ¨sÀæµÁÖZÁgÀ ªÀÄvÀÄÛ ¨É¯É KjPÉ

...................................................................................

  «±ÉèõÀuÉ

........................

zÉñÀzÀ ¥ÀæzsÁ¤AiÀiÁV £ÀgÉÃAzÀæ ªÉÆÃ¢ 8 ªÀµÀðªÀ£ÀÄß ¥ÀÆgÉʹzÁÝgÉ. zÉñÀzÁzÀåAvÀ F ¤«ÄvÀÛ ««zsÀ PÁAiÀÄðPÀæªÀĪÀ£ÀÆß PÉÃAzÀæ ¸ÀgÀPÁgÀ ¸ÀA¨sÀæªÀÄ¢AzÀ £ÀqɹzÉ. DzÀgÉ EzÀgÀ ¸ÀAvÀ¸ÀªÀ£ÀÄß ©eɦ PÁgÀåPÀvÀðgÀÄ ªÀÄvÀÄÛ £ÁAiÀÄPÀgÀÄ ªÀiÁvÀæ  ¸ÀA¨sÀæ«Ä¹zÀgÉà «£Á ªÀÄvÀzÁgÀ C®è.

EzÀPÉÌ ªÀÄÄRå PÁgÀt ¨É¯É KjPɬÄAzÀ ªÀÄvÀzÁgÀ ¥Àæw¢£À ¸ÁAiÀÄÄvÀÛ §zÀÄPÀÄwÛzÁÝ£É. E£ÉÆßAzÉqÉ, ¨sÀæµÁÖZÁgÀ¢AzÀ ¨ÉøÀwÛgÀĪÀÅzÀÄ. DzÀgÉ ¥ÀæzsÁ¤AiÀĪÀgÀÄ ªÀiÁvÀæ  ¨sÀæµÁÖZÁgÀ ®ªÀ¯ÉñÀªÀÇ E®è, ±ÀÆ£Àå JAzÀÄ ºÉýPÉ PÉÆnÖzÁÝgÉ.

©eɦAiÀĪÀgÀÄ ¸ÀzÁ ¨ÉÃgÉ ¨ÉÃgÉ «ZÁgÀUÀ¼À §UÉÎ ªÀiÁvÀæ ªÀiÁvÀ£ÁqÀÄvÁÛgÉAiÉÄà «£Á ¨É¯É KjPÉ ªÀÄvÀÄÛ ¨sÀæµÁÖÖZÁgÀzÀ PÀÄjvÀÄ ZÀPÁgÀ JvÀÄÛªÀÅ¢®è. «µÀAiÀiÁAvÀgÀzÀ ªÀÄÆ®PÀ d£ÀgÀ UÀªÀÄ£ÀªÀ£ÀÄß ¸ÀªÀĸÉåUÀ½AzÀ zÀÆgÀ«qÀĪÀÅzÀÄ EªÀgÀ PÉ®¸À. GzÁºÀgÀuÉUÉ- ±Á¸ÀPÀ PÉ. J¸ï. F±ÀégÀ¥Àà  ªÀÄA¢gÀ, ªÀĹâ, gÁdåzÀ gÁdQÃAiÀÄzÀ §UÉÎ ¥ÀÄASÁ£ÀÄ¥ÀÄARªÁV ªÀiÁvÀ£ÁqÀÄvÁÛgÉ. ¸Áämïð ¹nAiÀÄ ¨sÀæµÁÖZÁgÀ, PÀ¼À¥É ªÀÄvÀÄÛ CªÉÊeÁÕ¤PÀ PÁªÀÄUÁj, §qÀªÀjUÉ ªÀÄ£É ºÀAaPÉ, 24 UÀAmÉUÀ¼À PÁ® ¤ÃgÀÄ ¥ÀÆgÉÊPÉ AiÉÆÃd£É  §UÉÎ ªÀiÁvÉvÀÄÛªÀÅ¢®è.

¸ÀA¸ÀzÀ © ªÉÊ gÁWÀªÉÃAzÀæ gÁWÀªÉÃAzÀæ ¸ÀºÀ ªÀiÁqÀÄwÛgÀĪÀÅzÀÄ EzÀ£ÉßÃ. vÁ£ÀÄ vÀAzÀ ºÉƸÀ AiÉÆÃd£ÉUÀ¼À §UÉÎ ¥ÀwæPÁUÉÆÃ¶Ö ªÀiÁqÀÄvÁÛgÉ. ¸ÀªÀĸÉå §UÉÎ PÉýzÀgÉ CAvÀgÀgÁ¶ÖçÃAiÀÄ ªÀÄlÖzÀÄÝ J£ÀÄßvÁÛgÉ, «ZÁgÀ §zÀ°¸ÀÄvÁÛgÉ. ªÀÄ£ÀĵÀå ¸ÀvÀåªÀ£ÀÄß ©A©¸À®Ä «¥sÀ®£ÁzÁUÀ «ZÁgÀzsÁgÉAiÀÄ£ÀÄß §zÀ°¸ÀÄvÁÛ£É. d£ÀgÀ UÀªÀÄ£ÀªÀ£ÀÄß ¨ÉÃgÉqÉUÉ wgÀÄV¸ÀÄvÁÛ£É.

8 ªÀµÀðzÀ°è ªÉÆÃ¢ K£ÀÆ ¸ÁzsÀ£É ªÀiÁr®è J£ÀÄߪÀÅzÀÄ EzÀgÀ CxÀðªÀ®è. ¸ÁzsÀ£É DVzÉ. DzÀgÉ ¸ÁªÀiÁ£Àå d£ÀjUÉãÀÆ EzÀjAzÀ ¥ÀæAiÉÆÃd£ÀªÁV®è. gÉÊvÀgÀ, PÁ«ÄðPÀgÀ ¹Üw K£ÁVzÉ, ªÀÄzsÀåªÀÄ ªÀÄvÀÄÛ §qÀªÀgÀ PÀvÉ K£ÁVzÉ. ¨É¯É KjPÉ ªÀÄvÀÄÛ ¨sÀæµÁÖZÁgÀªÀ£Éßà d£À ªÀiÁvÀ£ÁqÀÄvÁÛgÉAiÉÄà «£Á ªÉÆÃ¢ «zÉñÀPÉÌ ºÉÆÃV §A¢zÀÝ£Àß®è. DzÀgÉ «zÉñÀPÉÌ ºÉÆÃV §AzÀ ¸ÀÄ¢Ý CªÀgÀ ¸ÁzsÀ£ÉAiÀÄ ¥ÀnÖAiÀÄ°è ¸ÉÃjzÉ. ¨sÀæµÁÖZÁgÀ ±ÀÆ£Àå JA¢zÁÝgÉ ¥ÀæzsÁ¤. CªÀgÀÄ AiÀiÁªÀ E¯ÁSÉUÉ JµÀÄÖ ¸À® ¨sÉÃn PÉÆnÖzÁÝgÉ?

PÀ£ÁðlPÀzÀ°è CªÀgÀzÉÝà ¸ÀgÀPÁgÀ«zÉ. EzÀÄ ºÀUÀgÀt, «ªÁzÀzÀ ¸ÀgÀPÁgÀ. E°è PÉÆ«qï PÁ®zÀ°è PÉÆgÉÆ£Á Qmï ªÀÄvÀÄÛ G¥ÀPÀgÀtUÀ¼À RjâAiÀįÁèzÀ ºÀUÀgÀt ¨sÀæµÁÖZÁgÀªÀ®èªÉÃ? DzÀgÀÆ D E¯ÁSÉAiÀÄ ¸ÀaªÀgÀÄ gÁeÁgÉÆÃ±ÀªÁV ªÉÄgÉzÁqÀÄwÛzÁÝgÉ. ¦J¸ïL £ÉêÀÄPÁw, ¸ÀºÁAiÀÄPÀ ¥ÁæzsÁå¥ÀPÀgÀ £ÉêÀÄPÁwAiÀÄ ¨sÀæµÁÖZÁgÀzÀ°è ¸ÀA§A¢üvÀ  ¸ÀaªÀgÀ ºÉ¸ÀgÀÄ PÉý§AzÀgÀÆ CzÀ£ÀÄß ªÀÄÄaѺÁPÀ¯Á¬ÄvÀÄ. EzÀPÉÌÃPÉ vÀ¤SÉ E®è,  ¸ÀaªÀgÁVzÀݪÀgÉÆ§âgÀ ªÉÄÃ¯É ±ÉÃ. 40 ¥À¸ÉðAmï ®AZÀ PÉýzÀ DgÉÆÃ¥À PÉý§AvÀÄ. EzÉà PÁgÀtPÉÌ UÀÄwÛUÉzÁgÀ£ÉƧ⠣ÉÃtÄ ºÁQPÉÆAqÀ. ¸ÀaªÀgÉÃ£ÉÆÃ gÁf£ÁªÉÄ PÉÆlÖgÀÄ. DzÀgÉ CªÀgÀ «gÀÄzÀÝ ¸ÀÆPÀÛ zÀÆgÀÄ zÁR°¸ÀzÉ §ZÁªï ªÀiÁqÀ®Ä J®è AiÀÄvÀß £ÀqÉ¢zÉ.

±Á¸ÀPÀ §¸À£ÀªÀ£ÀUËqÀ ¥Ánïï AiÀÄvÁß¼À ¹AJ ºÀÄzÉÝUÉ 2500 PÉÆÃn gÀÆ. PÉýzÀÝgÀÄ J£ÀÄߪÀ ¨ÁA¨ï ºÁQzÀgÀÄ.  D §UÉÎ AiÀiÁªÀ £ÁAiÀÄPÀgÀÆ ¨Á¬ÄâqÀÄwÛ®è, vÀ¤SÉAiÀÄÆ E®è. ¸ÀĪÀiÁgÀÄ 6 wAUÀ¼À »AzÉ rfl¯ï PÀgÉ¤ì ºÀUÀgÀt £ÀqÉzÁUÀ ©eɦAiÀÄ G£ÀßvÀ £ÁAiÀÄPÀ£À ºÉ¸ÀgÀÄ PÉý§A¢vÀÄ. FUɰèzÉ D ¥ÀæPÀgÀt? D £ÁAiÀÄPÀ£ÉÃ£ÉÆÃ CzÉà ºÀÄzÉÝAiÀİèzÁÝgÉ.  F jÃw J®èªÀ£ÀÄß ªÀÄÄaѺÁPÀĪÀ,  vÀªÀÄäªÀgÀ£ÀÄß gÀQë¸ÀĪÀ PÉ®¸À ¸ÀzÁ £ÀqÉzÀÄPÉÆAqÉà F 8 ªÀµÀðzÀ°è §A¢zÉ. EzÉà zÉÆqÀØ ¸ÁzsÀ£É!!!!!

²ªÀªÉÆUÀÎ ªÀĺÁ£ÀUÀgÀ ¥Á°PÉÉ, DgïnN, G¥À £ÉÆAzÀuÁ¢üPÁj PÀZÉÃjUÉ ±Á¸ÀPÀgÀÄ, ¸ÀA¸ÀzÀgÀÄ MªÉÄä ºÉÆÃV§gÀ°. ¨sÀæµÁÖZÁgÀ ±ÀÆ£ÀåªÉÇà J£ÀÄߪÀÅzÀ£ÀÄß §AzÀÄ ºÉüÀ°. ¸ÁªÀðd¤PÀgÀÄ ¨sÀæµÁÖZÁgÀ JAzÀgÉ CzÀ£ÀÄß ©eɦAiÀĪÀgÀÄ M¥ÀÄàwÛ®è. PÁAUÉæ¸ï, eÉrJ¸ï£ÀªÀgÀÄ ºÉýzÀgÉ CzÀÄ DgÉÆÃ¥À. ºÁUÁzÀgÉ ¨sÀæµÁÖÖZÁgÀªÀ£ÀÄß AiÀiÁgÀÄ ºÉüÀ¨ÉÃPÀÄ, ¸Á©ÃvÀĪÀiÁqÀ¨ÉÃPÀÄ. DgÉÆÃ¥À §AzÁPÀët J®è £ÁAiÀÄPÀgÀÄ ¸ÉÃj DvÀ zÉÆÃ¶AiÀÄ®è JA§ wÃ¥ÀÄð PÉÆlÄÖ©qÀÄvÁÛgÉ.

²ªÀªÉÆUÀÎzÀ°è ¸ÀA¸ÀzÀ © ªÉÊ gÁWÀªÉÃAzÀæ ¥ÀæzsÁ¤AiÀĪÀgÀ 8 ªÀµÀðzÀ ¸ÁzsÀ£ÉAiÀÄ ¥ÀnÖAiÀÄ£Éßà ªÀÄAr¹zÀgÀÄ. DzÀgÉ ¨É¯É KjPÉ, PÉÊUÁjPÉUÀ¼ÀÄ £À²¸ÀÄwÛgÀĪÀÅzÀÄ, SÁ¸ÀVÃPÀgÀt, EAvÀºÀ ¥ÀæªÀÄÄR «ZÁgÀzÀ §UÉÎ ZÀZÉð ªÀiÁqÀ¯Éà E®è. ¨É¯É KjPÉ §UÉÎ PÉýzÀgÉ CAvÀgÀgÁ¶ÖçÃAiÀÄ ªÀÄlÖzÀ°è  £ÀqÉAiÀÄÄwÛgÀĪÀ PÉ®ªÀÅ «zÀåªÀiÁ£ÀUÀ¼ÀÄ PÁgÀt JAzÀgÀÄ. ¥ÉmÉÆæÃ¯ï, rÃ¸É¯ï ¨É¯É KjPÉ ¹ªÉÄAmï, PÀ©ât, CqÀÄUÉ C¤®, CqÀÄUÉ JuÉÚ EªÉ®è KjPÉUÀÆ «zÀåªÀiÁ£ÀUÀ¼ÀÄ PÁgÀtªÁzÀgÉ EªÀgÀÄ vÉjUÉ ¥ÀæªÀiÁtªÀ£ÀÄß PÀrªÉÄ ªÀiÁr d£ÀjUÉ ¸ÁzsÀåªÁzÀµÀÄÖ PÀrªÉÄ ¨É¯ÉAiÀÄ°è ¹UÀĪÀAvÉ ªÀiÁqÀ§ºÀÄ¢vÀÄÛ. ZÀÄ£ÁªÀuÉ ºÀwÛgÀ §gÀÄwÛzÀÝAvÉAiÉÄà ¥ÉÉmÉÆæÃ¯ï zÀgÀ KjPÉ ¸ÀÜVvÀUÉÆ½¸ÀÄvÁÛgÉ. DUÀ ¸ÁzsÀåªÁUÀĪÀÅzÁzÀgÉ FUÉÃPÉ ¸ÁzsÀå«®è J£ÀÄߪÀ ¥Àæ±ÉßAiÀÄ£ÀÄß CªÀgÀÄ ¥ÀjºÀj¸À°®è.

f¯ÉèAiÀÄ JA¦JA ªÀÄvÀÄÛ «LJ¸ïJ¯ï EªÀgÀ PÁ®zÀ¯Éèà ªÀiÁgÁlQÌqÀ¯ÁVzÉ. ºÉƸÀ PÉÊUÁjPÉUÀ¼ÀÄ §gÀÄwÛ®è. «ªÀiÁ£À ¤¯ÁÝt ªÀÄvÀÄÛ CzÀPÉÌ £ÁªÀÄPÀgÀtzÀ¯Éèà J®ègÀÆ ªÀÄUÀßgÁVzÁÝgÉ. EgÀĪÀÀ PÉÊUÁjPÉUÀ¼ÀÄ ¸ÀºÀ CvÀÛ ªÉÄïÉüÀ¯ÁUÀzÉ, EvÀÛ PÀĹAiÀÄ®Æ DUÀzÀ ¹ÜwAiÀİèªÉ.

zÉñÀzÀ DyðPÀ ¹ÜwAiÉÄà E£ÀÆß ZÉÃvÀjPÉAiÀÄ ºÁ¢UÉ §A¢®è. ¸ÀªÀĸÉåUÀ¼ÀÄ ©eɦ ¸ÀgÀPÁgÀzÀ ¨É£ÀÄß ©nÖ®è. PÉ®ªÀÅ ¸ÁzsÀ£ÉUÀ¼ÁzÀgÀÆ J®èªÀÇ ¸ÁzsÀ£É JAzÀÄ ©A©¹PÉÆ¼ÀÄîªÀÅzÀÄ GavÀªÀ®è. ªÉÆÃ¢  110PÀÆÌ ºÉÀZÀÄÑ zÉñÀUÀ½UÉ 60PÀÆÌ ºÉZÀÄÑ ¨Áj  ºÉÆÃV §A¢zÉÝà ¸ÁzsÀ£É!  CªÀgÀ ¸ÁzsÀ£É CµÀÖ¢PÀÄÌUÀ¼À°èAiÀÄÆ ¥À¸Àj¹zÉ. zÉñÀzÀ ¸ÀªÀÄUÀæ C©üªÀÈ¢ÞAiÀiÁVzÉ£ÀÄߪÀ ¨ÉÆUÀ¼É ªÀiÁvÀ£ÁßqÀĪÀ ªÀÄÆ®PÀ 8£ÉAiÀÄ ªÀµÀðzÀ ¸ÀA¨sÀæªÀÄzÀ®Æè J®è ¸ÀªÀĸÉåUÀ¼À£ÀÆß ªÀÄÄaÑqÀĪÀ, d£À¸ÁªÀiÁ£ÀågÀ£ÀÄß £ÀA©¸ÀĪÀ PÉÀ®¸À ªÀiÁvÀæ F »A¢£ÀAvÉAiÉÄà ¢°è¬ÄAzÀ ºÀ½îAiÀĪÀgÉUÉ £ÀqÉAiÀÄÄvÀÛ¯Éà EzÉ.

4.6.2022

,,,,,,,,,,,,,,,,,,,,,,,,

Friday, 27 May 2022

ಶತಕದತ್ತ ಟೊಮ್ಯಾಟೋ ದರ




ಜನಸಾಮಾನ್ಯರಿಂದ ಹಿಡಿದು ಪ್ರತಿಯೊಬ್ಬನಿಗೂ ದೈನಂದಿನ ಅವಶ್ಯಕತೆಯಾದ ತರಕಾರಿಯ ಬೆಲೆ ಗಗನಕ್ಕೇರುತ್ತಿದೆ. ಒಂದೆಡೆ ಅಡುಗೆ ಅನಿಲ, ಅಡುಗೆ ಎಣ್ಣೆ, ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯಾಗಿ ಜನರು ಜೀವನ ಸಾಗಿಸುವುಕ್ಕೆ ಏದುಸಿರು ಬಿಡುತ್ತಿರುವಾಗ ತರಕಾರಿಯೂ ಗಾಯದ ಮೇಲೆ ಬರೆ ಎಂಬAತೆ ದರ ಎರಿಕೆಯ ಮೂಲಕ ಜನರಿಗೆ ಬಲವಾದ ಏಟು ಕೊಡುತ್ತಿದೆ
ಅತ್ಯಗತ್ಯ ವಸ್ತುಗಳಲ್ಲಿ ತರಕಾರಿಯೂ ಒಂದು. ಪ್ರತಿ ತರಕಾರಿ ಬೆಲೆ ಇಂದು ಏರುತ್ತಿದೆ. ಸುಮಾರು ೧೫ ದಿನದಿಂದೀಚೆಗೆ ಬಡವರ ತರಕಾರಿ ಎಂದೇ ಖ್ಯಾತವಾದ ಟೊಮೆಟೋ ನಿಧಾನವಾಗಿ ಏರುತ್ತಾ ಈಗ ೧೦೦ರ ಹತ್ತಿರ ಬಂದು ನಿಂತಿದೆ. ಇದರ ಮಾರ್ಗವನ್ನೇ ಉಳಿದ ತರಕಾರಿಗಳೂ ಹಿಡಿದಿವೆ. ಇದರಿಂದ ಕಿಸೆ ತುಂಬಾ ಹಣ ತೆಗೆದುಕೊಂಡು ಹೋದರೂ ಚೀಲದ ತುಂಬಾ ತರಕಾರಿ ತರಲಾಗುತ್ತಿಲ್ಲ.
ಹಾಪ್‌ಕಮ್ಸ್ನಲ್ಲಿ ಟೊಮೆಟೊ ೭೫-೮೦ಕ್ಕೆ ಲಭಿಸುತ್ತಿದ್ದರೂ ಮಾರುಕಟ್ಟೆಯಲ್ಲಿ ೯೦ ರೂ ನಲ್ಲಿದೆ. ನಾಟಿ ಮತ್ತು ಫಾರ್ಮ್ ಟೊಮೆಟೊಗಳು ೫-೧೦ ರೂ. ಅಂತರದಲ್ಲಿ ಮಾರಾಟವಾಗುತ್ತಿವೆ. ಈಗ ತರಕಾರಿ ಅಂಗಡಿ ಮತ್ತು ಮಾರುಕಟ್ಟೆಯಲ್ಲಿ ಮಾತ್ರ ತರಕಾರಿಗಳು ಸಿಗುವಂತಾಗಿದೆ. ಇಷ್ಟು ದಿನದವರೆಗೆ ತಳ್ಳುಗಾಡಿಯಲ್ಲಿ ಪ್ರತಿ ಬಡಾವಣೆಗೆ ತರಕಾರಿ ಬೆಳಿಗ್ಗೆಯೇ ಬರುತ್ತಿತ್ತು. ಆದರೆ ಈಗ ಮಾರಾಟಗಾರರು  ಬರುತ್ತಿಲ್ಲ. ಇದರಿಂದ ಗ್ರಾಹಕರು ಅಂಗಡಿಗೆ ಅಥವಾ ಮಾರುಕಟ್ಟೆಗೆ ಹೋಗಬೇಕಿದೆ. ಅಲ್ಲಿ ಚೌಕಾಸಿ ನಡೆಯುತ್ತಿಲ್ಲ. ೯೦ ರೂ ಕೊಟ್ಟೇ ತರುವ ಸ್ಥಿತಿ ನಿರ್ಮಾಣವಾಗಿದೆ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಅದರಲ್ಲೂ ಟೊಮೆಟೊ ಅಧಿಕ ಬೆಳೆಯುವ ಕೋಲಾರ, ಬೆಂಗಳೂರು, ಚಿಕ್ಕಮಗಳೂರು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಅಕಾಲಿಕ ಮಳೆಯಿಂದ ಟೊಮೆಟೊ ಗಿಡಗಳೇ ಕೊಳೆತುಹೋಗಿವೆ. ಇದರಿಂದ ಏಕಾಏಕಿ ದರ ಏರಿಕೆಯಾಗಿದೆ. ಎಪ್ರಿಲ್ ಅಂತ್ಯದವರೆಗೆ ದರ ಕಡಿಮೆ ಇತ್ತು. ೨೦- ೨೫ ರೂ ನಂತೆ ಮಾರಾಟವಾಗುತ್ತಿತ್ತು.
ದರ ಏರಿಕೆಯಿಂದಾಗಿ ಟೊಮೆಟೋಗೆ ಮಾರುಕಟ್ಟೆಯೂ ಕುಸಿದಿದೆ. ಸಣ್ಣ ಕುಟುಂಬದವರು ಇದನ್ನು ಖರೀದಿಸುವುದನ್ನೇ ಬಿಟ್ಟಿದ್ದಾರೆ. ಕೂಲಿ ಕಾರ್ಮಿಕರು ಮತ್ತು ಬಡ ಮತ್ತು ಮಧ್ಯಮ ವರ್ಗದವರು ಟೊಮೆಟೋ ತರುವುದನ್ನೇ ಬಿಟ್ಟಿದ್ದಾರೆ. ಟೊಮೆಟೊ ಹೊರತಾಗಿ ಇತರೇ ತರಕಾರಿಗಳ ದರವೂ ನಿಧಾನವಾಗಿ ಏರಿಕೆಯಾಗುತ್ತಿದೆ. ಇದಕ್ಕೆಲ್ಲ ಮಳೆಯೇ ಕಾರಣ ಎನ್ನುವುದು ವರ್ತಕರ ಅಬಿಪ್ರ‍್ರಾಯ. ಏಕಾಏಕಿ ಮಳೆ ಬಂದು ಬೆಳೆ ಎಲ್ಲ ಕೊಳೆತುಹೋಗಿದೆ ಇಲ್ಲವೇ ಕೊಚ್ಚಿಕೊಂಡು ಹೋಗಿದೆ. ತರಕಾರಿ ಬೆಳೆಗಾರ ಸತತ ನಷ್ಟದಲ್ಲಿದ್ದಾನೆ. ಹಾಕಿದ ಅಸಲೂ ಸಹ ಕೈಗೆ ಬಾರದಂತಾಗಿದೆ.
 ತರಕಾರಿ ದರ ಏರಿಕೆಯಿಂದ ಸಾಮಾನ್ಯ ಜನರಿಗಷ್ಟೇ ಅಲ್ಲ, ಹೋಟೆಲ್ ಮಾಲಕರು ಸಹ  ಪ್ರತಿನಿತ್ಯ ಕೈಸುಟ್ಟುಕೊಳ್ಳುತ್ತಿದ್ದಾರೆ. ಆದರೆ ಅವರಿಗೆ ಖರೀದಿ ಅನಿವರ‍್ಯವಾಗಿದೆ. ಹೊಟೆಲ್ ಸಾಂಬಾರ್ ಮತ್ತು ಊಟದ ಇತರೆ ಐಟಂಗಳಿಗೆ ತರಕಾರಿ ಅನಿವರ‍್ಯ.  
ಮಾರುಕಟ್ಟೆಯಲ್ಲಿ ತರಕಾರಿಗಳಾದ ಬೆಂಡೆ ೬೦ ರೂ, ಹೀರೇಕಾಯಿ ೫೦ ರೂ, ಹಾಗಲಕಾಯಿ ೬೦ ರೂ, ದೊಡ್ಡ ಮೆಣಸು ೧೦೦ರೂ ನಂತೆ ಮಾರಾಟವಾಗುತ್ತಿದೆ. ಸೊಪ್ಪುಗಳ ದರವೂ ಏರಿಕೆಯಾಗಿದೆ. ಕೊತ್ತಂಬರಿ ೨೦ ರು ಗೆ ಮೂರು ಕಟ್ಟಿನಂತೆ ಮಾರಾಟವಾಗುತ್ತಿದೆ.  

 

ನಮಗೂ ಹೆಚ್ಚಿನ ಬೆಲೆಗೆ ಟೊಮೆಟೊ ಸಿಗುತ್ತಿದೆ. ಖರೀದಿ ಸಾಧ್ಯವಾಗುತ್ತಿಲ್ಲ. ಹೆಚ್ಚು ಖರೀದಿ ಮಾಡಿದರೆ ಮಾರಾಟವಾಗುತ್ತಿಲ್ಲ. ಸ್ಟಾಕ್ ಮಾಡಲಾಗುತ್ತಿಲ್ಲ. ಕೊಳೆತುಹೋಗುವುದರ ಜೊತೆಗೆ ದರ ಒಮ್ಮೆಲೆ ಕುಸಿತವಾದರೆ ಏನು ಮಾಡಬೇಕು. ಗ್ರಾಹಕರಿಗೆ ಕಡಿಮೆ ದರಲ್ಲಿ ಕೊಡಬೇಕಿತ್ತು. ಆದರೆ ಅದು ಸಾಧ್ಯವಾಗುತ್ತಿಲ್ಲ.
- ಗಾಂಧಿಬಜಾರಿನ ಹೋಲ್‌ಸೇಲ್ ವ್ಯಾಪಾರಿ ಸುರೇಶ್.

 

 ಸಾರಿಗೂ ಟೊಮೆಟೊ ಅವಿನಾಭಾವ ಸಂಬAಧ. ಈಗ ಟೊಮೆಟೊ ಇಲ್ಲದೆ ಸಾರು ಮಾಡಬೇಕಿದೆ. ಪ್ರತಿ ದಿನ ಮನೆ ಎದುರೇ ಟೊಮೆಟೋ ಇತರೆ ತರಕಾರಿ ಖರೀದಿಸುತ್ತಿದ್ದೆ. ಆದರೆ ತರಕಾರಿ ಬರುತ್ತಿಲ್ಲ. ದರ ಏರಿಕೆಯಿಂದ ಟೊಮೆಟೊ ತರುವುದನ್ನೇ ನಿಲ್ಲಿಸಿದ್ದೇನೆ. ಕಡಿಮೆ ದರದ ತರಕಾರಿಗಳನ್ನು ತಂದು ಅಡುಗೆ ಮಾಡಬೇಕಿದೆ. ಎಲ್ಲಾ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ.  ಮಧ್ಯಮ ಮತ್ತು ಬಡವರ ಹೊಟ್ಟೆ ಮೇಲೆ ಹೊಡೆಯುವ ಕೆಲಸ ನಡೆಯುತ್ತಿದೆ.
-ಅನಿತಾ, ಗ್ರಾಹಕಿ, ಕೆ. ಆರ್. ಪುರಂ

 

ಫ್ಲೆಕ್ಸ್ಗೆ ಹಾವಳಿ ತಪ್ಪಿಸಲು ಬರಲಿದೆ ಬೈಲಾ


 


*  ದತ್ತಾತ್ರೇಯ ಹೆಗಡೆ


ಶಿವಮೊಗ್ಗ: ಯಾವುದೇ ರಾಜಕೀಯ ಪಕ್ಷಗಳ ಸಮಾರಂಭ, ಸಮಾವೇಶವಿರಲಿ, ಧರ‍್ಮಿಕ ಕರ‍್ಯಕ್ರಮಗಳಿರಲಿ, ಹುಟ್ಟುಹಬ್ಬವಿರಲಿ, ನಾಯಕರ ಆಗಮನವಿರಲಿ ನಗರದೆಲ್ಲೆಡೆ ಫ್ಲೆಕ್ಸ್ಗಳು ಆರ್ಭಟಿಸುತ್ತಿವೆ. ಇದರಿಂದ ಜನರು ಬೇಸತ್ತು ಹೋಗಿದ್ದ್ದಾರೆ. ಇದಕ್ಕೆ ಕಡಿವಾಣವಿಲ್ಲವೇ ಎನ್ನುವ ಸ್ಥಿತಿಗೆ ಬಂದು ತಲುಪಿದೆ. ಈ ಹಿನ್ನೆಲೆಯಲ್ಲಿ  ಮಹಾನಗರ ಪಾಲಿಕೆ ಫ್ಲೆಕ್‌ಗಳ ವಿರುದ್ಧ ಸಮರ ಸಾರಲು ಮುಂದಾಗಿದೆ.
 ಫ್ಲೆಕ್ಸ್ ಸಂಬAಧ ಬೈಲಾ ರೂಪಿಸುತ್ತಿದೆ.  ಜೊತೆಗೆ  ಆಗಾಗ ಫ್ಲೆಕ್ಸ್ ನಿರ್ಮೂಲನ  ಆಂದೋಲನವನ್ನು ಹಮ್ಮಿಕೊಳ್ಳಲು ನಿರ್ಧರಿಸಿದೆ. ಕಳೆದ ವಾರ ಜರುಗಿದ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪವಾಗಿತ್ತು.  ನಗರದ ಅಂದವನ್ನು ಕೆಡಿಸುವ, ಬಹುತೇಕ ವೃತ್ತಗಳಲ್ಲಿ ಸಿಕ್ಕ ಕಟ್ಟಡ, ವಿದ್ಯುತ್ ಕಂಬ, ಮರಗಳಿಗೆಲ್ಲ ಫ್ಲೆಕ್ಸ್ ಕಟ್ಟಲಾಗುತ್ತಿದೆ ಎಂದು ಸದಸ್ಯರು ಹೇಳಿ ಇದಕ್ಕೆ ಕಠಿಣ ಕ್ರಮ ಜರುಗಿಸುವಂತೆ ಮನವಿ ಮಾಡಿದ್ದರು. ಅಂದು ಆಯುಕ್ತರು ಈ ಬಗ್ಗೆ ಬೈಲಾ ರೂಪಿಸಿದರೆ  ಮಾತ್ರ ನಿಯಂತ್ರಣ  ಸಾಧ್ಯ. ಆ ಕೆಲಸವನ್ನು ಶೀಘ್ರ ಮಾಡÀಲಾಗುವುದು ಎಂದಿದ್ದರು. ಆ ಪ್ರಕಾರ ಈಗ ಬೈಲಾ ತಯಾರಿ ನಡೆಯುತ್ತಿದೆ.
ಬೈಲಾ ತಯಾರಾದ ನಂತರ ಪತ್ರಿಕೆಗಳ ಮೂಲಕ ಸಾರ್ವಜನಿಕ ಆಕ್ಷೇಪಣೆಗೆ ಬಿಡುಗಡೆ ಮಾಡÀಲಾಗುತ್ತದೆ. ಬೈಲಾ ಇಲ್ಲದೆ ಪಾಲಿಕೆ ಇವುUಳ ನಿಯಂತ್ರಣ ಮಾಡಲು ಸಾಧ್ಯವಿಲ್ಲ. ಪರವಾನಿಗೆ ಪಡೆದೇ ಹಾಕಬೇಕಾಗುತ್ತದೆ. ಇಲ್ಲದಿದ್ದರೆ ದಂಡ, ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ. ಈಗ ಫ್ಲೆಕ್ಸ್ ಹಾಕುವವರಿಗೆ  ಹೇಳುವವರು ಕೇಳುವವರು ಯಾರೂ ಇಲ್ಲದ ಸ್ಥಿತಿ ನೆಲೆಸಿದೆ.  ಗೋಪಿ ವೃತ್ತ, ಅಮೀರ್ ಅಹಮದ್ ವೃತ್ತ, ಅಶೋಕ ವೃತ್ತ , ಕೋರ್ಟ ವೃತ್ತ, ಶಿವಮೂರ್ತಿ ವೃತ್ತ, ಮಾರುಕಟ್ಟೆಯ ಶಿವಪ್ಪ ನಾಯಕ ವಿಗ್ರಹದ ಬಳಿ ಇವುಗಳ ಹಾವಳಿ ಮಿತಿಮೀರಿದೆ. ಒಬ್ಬರಿಗಿಂತ ಒಬ್ಬರು ಸ್ಪರ್ಧೆ ಎಂಬAತೆ ಫ್ಲೆಕ್ಸ್ ಹಾಕುತ್ತಿದ್ದಾರೆ.   
ಈ ಫ್ಲೆಕ್ಸ್ಗಳಿಂದಾಗಿ ವಾಹನ ಸವಾರÀರ ಗಮನ ಬೇರೆಡೆ ಸೆಳೆಯುವಂತಾಗಿದೆ. ಅಪಘಾತ ಎದುರಾಗುವ ಸಾಧ್ಯತೆಯೂ ಇದೆ. ನೆಹರು ರಸ್ತೆ ಮತ್ತು ಬಾಲರಾಜ ರಸ್ತೆಯ ಡಿವೈಡರ್ ಇರುವುದೇ ಫ್ಲೆಕ್ಸ್ ಮತ್ತು  ಬ್ಯಾನರ್ ಕಟ್ಟಲು ಎಂಬAತಾಗಿದೆ. ಇವು ಗಾಳಿಗೆ ಕಿತ್ತು ಬೀಳುತ್ತಿವೆ, ಕೆಲವೊಮ್ಮ ವಾಲುತ್ತವೆ. ಇದು ಪ್ರಯಾಣಿಕರಿಗೆ  ಅಪಾಯ ತಂದೊಡ್ಡುತ್ತಿದೆ. ಇದರ ಹೊರತಾಗಿ ರಿಯಲ್ ಎಸ್ಟೇಟ್, ಕೋಚಿಂಗ್ ಕ್ಲ್ಲಾಸ್,  ಮತ್ತಿತರ ವಾಣಿಜ್ಯ ಉದ್ದೇಶದ ಫೆಕ್ಸ್ಗಳೂ ರಾರಾಜಿಸುತ್ತಿವೆ.  ಸಮಾರಂಭ ಅಥವಾ ಕರ‍್ಯಕ್ರಮ ಮುಗಿದ ನಂತರ ಅವುಗಳನ್ನು ತೆರವುಗೊಳಿಸುವವರು ತೀರ ಕಡಿಮೆ. ಪಾಲಿಕೆಯವರೇ ಅದನ್ನು ತೆಗೆಯುವುದು ಹೆಚ್ಚು. ಪೌರ ಕಾರ್ಮಿಕರಿಗೆ ಇದೇ ಕೆÀಲಸವಾಗುತ್ತಿದೆ.
ಈಗ ಪಾಲಿಕೆಯು ೧೫ ದಿನ ಅಥÀವಾ ತಿಂಗಳಿಗೊಮ್ಮೆ ಆರೋಗ್ಯ ನಿರೀಕ್ಷಕರ ನೇತೃತ್ವದಲ್ಲಿ ಸುಮಾರು ೧೦೦ ಪೌರಕಾರ್ಮಿಕರೊಂದಿಗೆ ಫೆಕ್ಸ್ ತೆಗೆಯುವ ಕೆಲಸ ಮಾಡುತ್ತಿದೆ.  ಹೋರ್ಡಿಂಗ್ಸಳನ್ನು ಅಳವಡಿಸುವ ಬಗ್ಗೆಯೂ ಬೈಲಾ ತಯಾರಾಗಲಿದೆ.
 ಒಟ್ಟಿನಲ್ಲಿ, ಇನ್ನು ಕೆಲವೇ ದಿನದಲ್ಲಿ ನಗರ ಫ್ಲೆಕ್ಸ್ ಮುಕ್ತವಾಗಲಿದೆ. ಇತ್ತೀಚೆಗೆ ಬಂದಿರುವ ಆಯುಕ್ತ ಮಾಯಣ್ಣ ಗೌಡ ಇದರ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿ ನಗರ ಸೌಂರ‍್ಯ ಉಳಿಸಲು ಮುಂದಾಗಿದ್ದಾರೆ.

ಬಾಕ್ಸ್

ಬೈಲಾ ಸಿದ್ದವಾದಲ್ಲಿ ಫೆಕ್ಸ್ಸ್ ಹಾಕಲು ನಿಗದಿತ ಜಾಗವನ್ನು ಗುರುತಿಸಲಾಗುತ್ತದೆ.  ಉಳಿದ ಜಾಗ, ವೃತ್ತದಲ್ಲಿ ಹಾಕುವಂತಿಲ್ಲ.  ಫ್ಲೆಕ್ಸ್ಸ್ ಹಾಕುವವರು ಪಾಲಿಕೆಗ ಹಣಕಟ್ಟಿ ಪರವಾನಿಗೆ ಪಡೆೆಯಬೇಕಾಗುತ್ತದೆ.  ಇದರೊಟ್ಟಿಗೆ ಫುಟ್‌ಪಾತ್À ಮತ್ತು ಕಟ್ಟಡಗÀಳಿಗೆ ಹಾಕಿದ ದೊಡ್ಡ ದೊಡ್ಡ ಬೋರ್ಡುಗಳು ಪಾದಚಾರಿಗಳಿಗೆ ಮತ್ತು ಸಾರ್ವಜನಿರಿಗೆ ತೊಂದರೆ ಕೊಡುತ್ತಿವೆ. ಇವುಗಳನ್ನೂ ಸಹ ತೆಗೆದುಹಾಕುವ ಬಗ್ಗೆ ಕಾನೂನು ರೂಪಿಸಲಾಗುತ್ತಿದೆ.
- ಮಾಯಣ್ಣ ಗೌÀಡ, ಆಯುಕ್ತ
................................

ಮಳೆ ನಿಂತು ಹೋದ ಮೇಲೆ


ದತ್ತಾತ್ರೇಯ ಹೆಗಡೆ
 

 ಶಿವಮೊಗ್ಗ: ಕಳೆದ  ವಾರ ಅಕಾಲಿಕವಾಗಿ ಸುರಿದ ಮಳೆ ವ್ಯಾಪಕ ಹಾನಿಯನ್ನುಂಟು ಮಾಡಿದೆ. ಮಳೆ, ಪ್ರವಾಹ ಮುಗಿದು ೪ ದಿನವಾಗಿದೆ. ರಾಜಕೀಯ ನಾಯಕರು, ಜನಪ್ರತಿನಿಧಿಗಳು, ಸಚಿವರು, ಅಧಿಕಾರಿಗಳು ಒಬ್ಬರ ನಂತರ ಒಬ್ಬರಂತೆ ಪ್ರವಾಹಪೀಡಿತ ಸ್ಥಳಗಳಿಗೆ ಹೋಗಿ ದುಃಖ ದುಮ್ಮಾನ ಆಲಿಸಿ, ಹಾನಿಗೊಳಗಾದ ಸ್ಥಳ ಪರಿಶೀಲಿಸಿ ಸಾಂತ್ವನ ಹೇಳಿಬಂದಿದ್ದಾರೆ. ಇದು ಪ್ರತಿಬಾರಿ ಪ್ರವಾಹ ಬಂದಾಗಲೂ ನಡೆಯುವ ಮಾಮೂಲಿ ಪದ್ಧತಿ.
ತಮಗೆ ವೋಟು ಕೊಟ್ಟು ಆಯ್ಕೆ ಮಾಡಿ ಕಳುಹಿಸಿದ ಮತದಾರರ ಬವಣೆಯನ್ನು ಇಷ್ಟರ ಮಟ್ಟಿಗಾದರೂ ಕೇಳುತ್ತಿದ್ದರಲ್ಲಾ ಎನ್ನುವುದೇ ದೊಡ್ಡ ಸಮಾಧಾನÀ, ಇನ್ನೊಂದೆಡೆ ಪ್ರವಾಹ ಸ್ಥಳಕ್ಕೆ ನಗರ ಪಾಲಿಕೆ ಸದಸ್ಯರು ಬಂದಿದ್ದಾರೆ. ಸಚಿವರು ನಾಲ್ಕು ದಿನದ ನಂತರ ಬರುತ್ತಿದ್ದಾರೆ. ಯಾವುದೇ ಕೆಲಸ ಮಾಡದೆ ನಿದ್ದೆ ಮಾಡುತ್ತಾ ಕಾಲ ಕಳೆದ ಪಾಲಿಕೆ ಜನಪ್ರತಿನಿಧಿಗಳಿಗೆ ತಮ್ಮ ವಾರ್ಡಿನÀ ನೈಜ ಸಮಸ್ಯೆ ಏನೆನ್ನುವುದು ಈಗ ಮನದಟ್ಟಾಗುತ್ತಿದೆ. ಜನರಿಂದ ಛಿ, ಥೂ ಎಂದು ಬೈಸಿಕೊಂಡಿದ್ದಾರೆ.
ಭರವಸೆ ಕೊಟ್ಟು ಬಂದ ನಂತರ ಅದನ್ನು ಈಡೇರಿಸುವ ಬಹುದೊಡ್ಡ ಹೊಣೆಗಾರಿಕೆ ಇವರ ಮೇಲಿದೆ. ಮನೆ ಬಿದ್ದು ಹೋದವರಿಗೆ ಮನೆ ನರ‍್ಮಿಸಿಕೊಡುವುದು, ಗೋಡೆಬಿದ್ದ ಮನೆಗೆ ಗೋಡೆ ಹಾಕಿಸಿಕೊಡುವುದು, ಚಾವಣಿ ಕಿತ್ತುಬಿದ್ದ ಮನೆಗೆ ಚಾವಣಿ ಹಾಕಿಸಿಕೊಡುವುದು... ಹೀಗೆ ವಿಧ ವಿಧದ ಸಮಸ್ಯೆಗಳಿಗೆ ಜನಪ್ರತಿನಿಧಿಗಳು ತಲೆಕೊಡಬೇಕಿದೆ. ಇಲ್ಲವಾದಲ್ಲಿ ಇವೆಲ್ಲ ವಿಶ್ವಾಸಕ್ಕೆ ಅನರ್ಹರು. ಮತದಾರರ ಸಂಕಷ್ಟಕ್ಕೆ ಭಾಗಿಯಾಗದವರು ಎಂಬ ಅರ್ಥ ಬರುವುದು ನಿಶ್ಚಿತ. ಅವುಗಳಿಗೆಲ್ಲಾ ಸೂಕ್ತ ಪರಿಹಾರ ಕೊಡುವುದು ಅಥವಾ ಕೊಡಿಸುವುದು ಇವರ ಆದ್ಯ ಕೆಲಸವಾಗಬೇಕು. ಪಾಲಿಕೆ ಅಥವಾ ಜಿಲ್ಲಾಡಳಿತ, ಸರಕಾರದ ಮಟ್ಟದಲ್ಲಿ ವ್ಯವಹರಿಸಿ ಈ ಕೆಲಸ ಮಾಡಿಸಿಕೊಡಬೇಕು. ಜನರ ಕಣ್ಣೀರು ಒರೆಸುತ್ತೇವೆ ಎಂದು ಮತಕೇಳಲು ಬರುವಾಗ ಹೇಳುವ ಮಾತನ್ನು ಇಲ್ಲಿ ಸಾಧಿಸಿ ತೋರಿಸಬೇಕಿದೆ.
ಮಳೆ ನಿಂತಿದೆ. ಬಿಸಿಲಿನ ಆಗಮನವಾಗಿದೆ. ಪರಿಹಾರ ಕರ‍್ಯಕ್ಕೆ ಜನಪ್ರತಿನಿಧಿಗಳು ತತಕ್ಷಣ ಇಳಿಯಬೇಕು. ಬದುಕು, ಸೂರು ಕಳೆದುಕೊಂಡವರಿಗೆ ಆಸರೆಯಾಗಿ ನಿಲ್ಲಬೇಕು. ಕಾಳಜಿ ಕೇಂದ್ರದಿAದ ಹೊರಬಂದಿರುವ ಹಲವರಿಗೆ ಮನೆಯಲ್ಲಿ ಆಹಾರಕ್ಕೆ ವ್ಯವಸ್ಥೆ ಕಲ್ಪಿಸಬೇಕು. ಎರಡು ವರ್ಷಗಳ ಹಿಂದೆ  ಮಳೆಗಾಲದಲ್ಲಿ ತುಂಗಾ ನದಿಗೆ ಪ್ರವಾಹ ಬಂದಾಗ ದಡದ ಪಕ್ಕದಲ್ಲಿರುವ ರಾಜೀವಗಾಂಧಿ ಬಡಾವಣೆಯ ನಿವಾಸಿಗಳ ಮನೆಗಳೆಲ್ಲ ತೊಳೆದುಹೋಗಿದ್ದವು. ಮನೆ ಬಿದ್ದವರಿಗೆ ೫ ಲಕ್ಷ ರೂ. ಪರಿಹಾರ ಕೊಡುತ್ತೇವೆ ಎಂದು ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಘೋಷಿಸಿ ಸ್ವತಃ ಸ್ಥಳ ಪರಿಶೀಲಿಸಿ ಹೋಗಿದ್ದರು.  ಇವರಿಗೆ ಕೇವಲ ಒಂದು ಲಕ್ಷ ರೂ. ಮಾತ್ರ ಕೊಟ್ಟು  ಇಂದಿನವರೆಗೆ ಉಳಿದ ಹಣವನ್ನು ಕೊಟ್ಟಿಲ್ಲ. ಇದನ್ನು ನೆನೆಪಿನಲ್ಲಿಟ್ಟುಕೊಂಡು ಮತ್ತೆ ವಚನಭ್ರಷ್ಟರಾಗದೆ ಈ ಬಾರಿ ಪ್ರವಾಹ ಸಂತ್ರಸ್ಥರಿಗೆ ನೆರವು ಕಲ್ಪ್ಪಿಸಬೇಕಿದೆ.
   ಈಗಾಗಿರುವುದು ಸಣ್ಣ ಪ್ರಮಾಣದ ಹಾನಿ. ಇದನ್ನು ಗಮನದಲ್ಲಿಟ್ಟುಕೊಂಡು ಮುಂಬರುವ ಮಳೆಗಾಲದಲ್ಲಿ ಎದುರಾಗಬಹುದಾದ ಪ್ರವಾಹದ ಅಂದಾಜನ್ನು ಹಾಕುವ ದೂರಾಲೋಚÀನೆ ಮಾಡÀಬೇಕು. ಎಲ್ಲೆಲ್ಲಿ ಪ್ರವಾಹ ಸಂಭವಿಸಬಹುದು, ಅಲ್ಲಿ ಯಾವ ಕ್ರಮದ ಮೂಲಕ ಅದನ್ನು ತಡೆಯಬಹುದು, ಪ್ರವಾಹ ಬರಲು ಕಾರಣವೇನು, ಒಂದು ವೇಳೆ ಬಂದಲ್ಲಿ ಏನು ಮಾಡಬೇಕೆನ್ನುವುದರ ಬಗ್ಗೆ ಯೋಜನೆ ಸಿದ್ಧಪಡಿಸಿಕೊಳ್ಳುವುದು ಪಾಲಿಕೆಯ ಕೆಲಸವಾಗಬೇಕಿದೆ. ವಾರ್ಡನ್ನೇ ಮರೆತು ಕುಳಿತಿರುವವರಿಗೆಲ್ಲ ಪ್ರವಾಹವು ಛಳಿಯನ್ನು ಮುಂದಿನ ದಿನಗಳಲ್ಲಿ ಬಿಡಿಸಲಿದೆ.
ನಗರದಲ್ಲಿ ರಾಜಾಕಾಲುವೆಯ ಹೂಳೆತ್ತುವಿಕೆ ಸಮರ್ಪಕವಾಗಿ ನಡೆದಿಲ್ಲ,  ಹೂಳಿನಿಂದ ಕಾಲುವೆ ತುಂಬಿದೆ. ಇದರಿಂದ ಬಹುಬೇಗ ಪ್ರವಾಹ ಬರುತ್ತಿದೆ. ಹಲವು ಬಡಾವಣೆಗಳಲ್ಲಿ ಅದನ್ನು ಒತ್ತುವರಿ ಮಾಢಿ ಚಿಕ್ಕದಾಗಿಸಿದ್ದರಿಂದ ಪ್ರವಾಹ ಬರುತ್ತಿದೆ. ಇದನ್ನು ತೆರವುಗೊಳಿಸುವ ಕೆಲಸವಾಗಬೇಕು, ಚಾನೆಲ್ ದಂಡೆ ಎಲ್ಲೆಲ್ಲಿ ಶಿಥಿಲವಾಗಿದೆ ಎನ್ನುವುದರ ಪರಿಶೀಲನೆ ನಡೆೆಸಬೇಕು. ಜನವಸತಿ ಪ್ರದೇಶದಲ್ಲಿ ಹಾದುಹೋಗಿರುವ ಚಾನೆಲ್‌ನಿಂದ ತೊಂದರೆ ಸಂಭವಿಸಬಹುದೇ ಎನ್ನುವುದರ ಪರಿಶೀಲನೆಯನ್ನು ಮೊದಲು ಮಾಡಬೇಕಿದೆ.
ಸ್ಮಾರ್ಟ್ ಸಿಟಿಯ ಅವೈಜ್ಞಾನಿಕ ಮತ್ತು ಗಂಡಾAತರಕಾರಿ ಕೆಲಸಗಳಿಂದ ಎಲ್ಲೆಲ್ಲಿ ಹಾನಿಯಾಗಿದೆ, ಕೆರೆ ಸೃಷ್ಟಿಯಾಗಿತ್ತು ಎನ್ನುವುದನ್ನು ಪರಿಶೀಲಿಸಿ ಅದರ ದುರಸ್ತಿ ಕೆÀಲಸ ಆರಂಭಿಸಬೇಕಿದೆ. ಮುಂದಿನ ೮-೧೦ ದಿನದಲ್ಲಿ ಮೊನ್ನೆ ಸಂಭವಿಸಿದ ಪ್ರವಾಹಕ್ಕೆ ಉತ್ತರ ಕಂಡುಕೊಳ್ಳದಿದ್ದಲ್ಲಿ ಈ  ತಿಂಗಳಾAತ್ಯದಲ್ಲಿ ಆರಂಭವಾಗಲಿದೆ ಎಂದು ಹೇಳಲಾಗುತ್ತಿರುವ ಮುಂಗಾರು ಮಳೆÀಯಿಂದ ಇನ್ನಷ್ಟು ಅನಾಹುತ ಸಂಭವಿಸಬಹುದು.
ಬೆAಬಲಿಗರೊAದಿಗೆ ಹೋಗಿ ಸ್ಥಳ ಪರಿಶೀಲನೆ ಮಾಡಿದರೆÉ ಸಾಲದು, ನಂತರ ಅದೇ ಬೆಂಬಲಿಗರನ್ನು ಮುಂದಿಟ್ಟುಕೊAಡು ಪರಿಹಾರ ಕಲ್ಪಿ¸ಬೇಕು.. ಸಮಸ್ಯೆಗೆ ಉತ್ತರ ಕಂಡುಹಿಡಿಯುವ ಕೆಲಸವಾಗಲಿ. ಇನ್ನಾದರೂ ಪಾಲಿಕೆ ಮತ್ತು ಅದರ ಜನಪ್ರತಿನಿಧಿಗಳು, ಅಧಿಕಾರಿಗಳು ಯುದ್ಧೋಪಾದಿಯಲ್ಲಿ ಕೆಲಸ ಮಾಡಿ ಪ್ರವಾಹದ ಭೀತಿ ತಪ್ಪಿಸಬೇಕಿದೆ.
 

Monday, 16 September 2019

ಮೊಬೈಲ್ ಚಟ ಬಿಡಿಸಲು ಯೋಜನೆ ರೆಡಿ





ಮನೆಯೇ ಮೊದಲ ಪಾಠಶಾಲೆ, ಜನನಿ ತಾನೆ ಮೊದಲ ಗುರು. ಮೊಬೈಲ್‌ನಿಂದಾಗುವ ಅನಾಹುತಗಳ ಬಗ್ಗೆೆ ಪಾಲಕರು ಮೊದಲು ಜಾಗೃತರಾಗುವುದು ಒಳ್ಳೆೆಯದು. ಮನೆಯಲ್ಲಿ ಇದು ಆರಂಭವಾದರೆ ಆನಂತರ ಶಿಕ್ಷಕರು ಈ ಬಗ್ಗೆೆ ತಿಳಿವಳಿಕೆ ಮೂಡಿಸುವಲ್ಲಿ ಯಶಸ್ವಿಿಯಾಗುತ್ತಾಾರೆ. ಆದ್ದರಿಂದ ಪಾಲಕರು ಮೊಬೈಲ್‌ನಿಂದ ಮಕ್ಕಳನ್ನು ದೂರವಿಡಲೇಬೇಕಿದೆ. ಈ ಹಿನ್ನೆೆಲೆಯಲ್ಲಿ ಜಿಲ್ಲಾಾ ಪಂಚಾಯತ್, ಶಿಕ್ಷಣ  ಮತ್ತು ಆರೋಗ್ಯ ಇಲಾಖೆ ವತಿಯಿಂದ ಜಿಲ್ಲೆೆಯಲ್ಲಿ ಮನೋವೈಜ್ಞಾಾನಿಕ ಕೌನ್ಸಿಿಲಿಂಗ್ ನಡೆಸಲು ಸರ್ವ ಸಿದ್ಧತೆ ನಡೆದಿದೆ. ಪ್ರತಿ ಶಾಲಾ-ಕಾಲೇಜಿನಲ್ಲಿ ಮಕ್ಕಳಿಗೆ ಕೌನ್ಸೆೆಲಿಂಗ್ ನಡೆಸುವ ಯೋಜನೆ ರೂಪಿಸಲಾಗಿದೆ
 .

* ಇತ್ತೀಚೆಗೆ ಮೊಬೈಲ್ ಗೇಮ್ ಆಡುತ್ತ ನಡೆದುಕೊಂಡು ಹೋಗುತ್ತಿಿದ್ದ ಶಿವಮೊಗ್ಗದ ಬಾಲಕನೊಬ್ಬ ಬಿದ್ದು ಸಾವನ್ನಪ್ಪಿಿದ!
* ಬೆಳಗಾವಿಯಲ್ಲಿ ಮೊಬೈಲ್ ಗೇಮ್ ಆಡಲು ಇಂಟರ್‌ನೆಟ್‌ಗೆ ತಂದೆ ಹಣ ನೀಡದಿದ್ದಾಾಗ ತಂದೆಯ ತಲೆಯನ್ನು ಒಡೆದು ಕೊಂದು ಹಾಕಿದ ಮಗ!
* ಉತ್ತರ ಪ್ರದೇಶದ  ರಾಯ್‌ಬರೇಲಿ ಜಿಲ್ಲೆೆಯಲ್ಲಿ ದಿನದ 8 ತಾಸು ಮೊಬೈಲ್‌ನಲ್ಲೇ ಕಾಲ ಕಳೆಯುವ ಮೂರು ವರ್ಷದ ಮಗು!
* ನಮ್ಮ ಮಗು ಮೊಬೈಲ್ ಬಿಡುವುದೇ ಇಲ್ಲ, ಬೇಕು ಅಂತ ಹಠ ಮಾಡುತ್ತದೆ. ಶಾಲೆಯಿಂದ ಬಂದಾಕ್ಷಣ ಮೊಬೈಲ್ ಹಿಡಿದುಕೊಳ್ಳುತ್ತದೆ,  ಗೇಮ್‌ನಲ್ಲೇ ಮುಳುಗಿರುತ್ತದೆ, ಇತ್ತೀಚೆಗೆ ವಿದ್ಯಾಾಭ್ಯಾಾಸದತ್ತ ಗಮನ ಕಡಿಮೆಯಾಗಿ, ಪ್ರಗತಿ ಇಳಿಮುಖವಾಗುತ್ತಿಿದೆ ಎನ್ನುವ ಪಾಲಕರ ದೂರು!
* ನನ್ನ ಮಗನ ಮೊಬೈಲ್ ಹೇಗಾದರೂ ಮಾಡಿ ಸೀರ್ ಮಾಡಿ. ಓದು, ಊಟ, ನಿದ್ದೆೆ ಎಲ್ಲ ಬಿಟ್ಟು ಪಬ್‌ಜಿಯಲ್ಲಿ ಮುಳುಗಿಬಿಟ್ಟಿಿದ್ದಾಾನೆ ಎನ್ನುವ ಕಾಲೇಜು ವಿದ್ಯಾಾರ್ಥಿಗಳ ಪಾಲಕರ ಅಳಲು!

ಈ ಮೇಲಿನ ಘಟನೆಗಳನ್ನು ಅವಲೋಕಿಸಿದಾಗ ಮಕ್ಕಳನ್ನು ಮೊಬೈಲ್‌ನಿಂದ ರಕ್ಷಿಸದಿದ್ದರೆ ಭವಿಷ್ಯದಲ್ಲಿ ಬಹುದೊಡ್ಡ ಗಂಡಾಂತರ ಕಾದಿದೆ ಎನ್ನುವುದರ ಅರಿವಾಗದೇ ಇರದು.  ಮೊಬೈಲ್‌ನಿಂದಾಗುವ ದುಷ್ಪರಿಣಾಮವನ್ನು ಮಕ್ಕಳಿಗೆ ಹೇಳುವುದರ ಜೊತೆಗೆ ಅವರ ಪಾಲಕರನ್ನು ಈ ಬಗ್ಗೆೆ ಜಾಗೃತಗೊಳಿಸುವುದು. ಜೊತೆಗೆ ಶಿಕ್ಷಕರು ಪರಿಣಾಮಕಾರಿಯಾಗಿ ಇದನ್ನು ಮಕ್ಕಳಿಗೆ ಮನಮುಟ್ಟುವಂತೆ ಹೇಳುವುದು ಸದ್ಯದ ಅತ್ಯಂತ ಜರೂರಿನ ಕೆಲಸವಾಗಿದೆ.
ವಿದ್ಯಾಾರ್ಥಿಗಳಲ್ಲಿ ಮೊಬೈಲ್ ಗೇಮ್ ಚಟ ಹೆಚ್ಚುತ್ತಿಿದೆ. ಮೊಬೈಲ್‌ನಿಂದಾಗಿ ತಮ್ಮ ಭವಿಷ್ಯವನ್ನು ತಾವೇ ಹಾಳುಮಾಡಿಕೊಳ್ಳುತ್ತಿಿದ್ದಾಾರೆ. ಪಬ್‌ಜಿಯಂತಹ ಗೇಮ್‌ನಿಂದ ಜೀವ ಕೇಳದುಕೊಳ್ಳುತ್ತಿಿದ್ದಾಾರೆ. ಮೊಬೈಲ್ ಗೀಳು ತಪ್ಪಿಿಸಲು  ಈಗ ಹೆಣಗಾಡಬೇಕಾದ ಸ್ಥಿಿತಿ ಎದುರಾಗಿದೆ. ಇದಕ್ಕಾಾಗಿ ಪಾಲಕರು, ವಿದ್ಯಾಾಸಂಸ್ಥೆೆಯವರು , ಶಿಕ್ಷಕರು ವಿವಿಧ ಕ್ರಮಗಳನ್ನು ಅನುಸರಿಸುತ್ತಿಿದ್ದರೂ ಇದನ್ನು ನಿಯಂತ್ರಿಿಸಲು ಇನ್ನೂ ಸಾಧ್ಯವಾಗಿಲ್ಲ.
ಸಾಮಾಜಿಕ ಜಾಲತಾಣ ಮತ್ತು ಗೇಮ್‌ಗಳು ಹೆಚ್ಚು ಪ್ರಚಲಿತವಾಗುತ್ತಿಿರುವಂತೆಯೇ ಮಕ್ಕಳು  ಅದರತ್ತ ಆಕರ್ಷಿತರಾಗುತ್ತಿಿದ್ದಾಾರೆ. ಕೆಲವರಿಗೆ ಗೇಮ್, ಕೆಲವರಿಗೆ ಫೇಸ್‌ಬುಕ್, ಇನ್ನೂ ಕೆಲವರಿಗೆ ವಾಟ್ಸಾಾಪ್ ಗೀಳು ಅಂಟಿಕೊಂಡಿದೆ. ತಾವು ಹಾಕಿದ ಫೋಟೊ ಅಥವಾ ಮೆಸೇಜ್‌ಗೆ ಹೆಚ್ಚು ಲೈಕ್‌ಗಳು ಬರತೊಡಗಿದಂತೆ ಅವರ ಆಸಕ್ತಿಿಯೂ, ಅಪ್‌ಲೋಡ್ ಮಾಡುವ ಚಿತ್ರದ ಪ್ರಮಾಣವೂ ಹೆಚ್ಚುತ್ತದೆ. ಒಂದು ವೇಳೆ ಕಡಿಮೆ ಲೈಕ್ ಬಂತೆಂದರೆ ಶುರುವಾಗುತ್ತದೆ ಟೆನ್ಶನ್, ಕೀಳರಿಮೆ. ಇದೇ ಮೊಬೈಲ್‌ನ ದೊಡ್ಡ ರೋಗ. ಯಾವಾಗ ಇದಕ್ಕೆೆ ಅಂಟಿಕೊಂಡುಬಿಡುತ್ತಾಾರೋ ಅದರಿಂದ ಹೊರಬರುವುದು ತೀರಾ ಕಷ್ಟ. ಮೊಬೈಲ್ ದಾಸರಾದರೆ ಸುಲಭದಲ್ಲಿ ಹೊರಬರಲು ಸಾಧ್ಯವೇ ಇಲ್ಲ ಎನ್ನುತ್ತಾಾರೆ ಮನೋವೈದ್ಯರು. ಇದರಿಂದ ಹಠಮಾರಿತನ ಹೆಚ್ಚುತ್ತದೆ, ಪ್ರಗತಿ ಕುಂಠಿತವಾಗುತ್ತದೆ ಎನ್ನುತ್ತಾಾರೆ. 
ಮೊದಲೆಲ್ಲ ಬಾಲ್ಯದಲ್ಲಿದ್ದಾಾಗ ಮಕ್ಕಳಿಗೆ ಆಟಿಕೆ ವಸ್ತುಗಳನ್ನು ಕೊಟ್ಟು ಅವರಿಗೆ ಹಾಲು, ಊಟ ಕೊಡುವುದು, ಹಠ ಕಡಿಮೆ ಆಗುವಂತೆ ಮಾಡುವ ಪದ್ದತಿ ಇತ್ತು. ಈಗ ಆಟಿಕೆಗಳ ಸ್ಥಾಾನವನ್ನು ಮೊಬೈಲ್‌ಗಳು ಆಕ್ರಮಿಸಿಬಿಟ್ಟಿಿವೆ. ಹಾಲುಕುಡಿಯುವ ಮಗುವಿನ ಕೈಗೂ ಪಾಲಕರು ಕೊಡುವುದೇ ಮೊಬೈಲ್. ಅಪ್ಪ, ಅಮ್ಮನ ಜೊತೆ ಮಗುವೂ ಸಹ  ಮೊಬೈಲಿನಲ್ಲೇ ತಲ್ಲೀನವಾಗಿರುವ ಎಷ್ಟೋೋ ಚಿತ್ರಗಳನ್ನು ಕಾಣುತ್ತಿಿದ್ದೇವೆ. ಈ ಚಟ ಮಗುವನ್ನು ಖಿನ್ನತೆಗೆ ತಳ್ಳಿಿ ಕೊನೆಗೆ ಆತ್ಮಹತ್ಯೆೆಯೊಂದೇ ದಾರಿ ಎಂದು ಯೋಚಿಸುವ ಮಟ್ಟಕ್ಕೆೆ ತಳ್ಳಿಿಬಿಡುತ್ತದೆ.
ಮೊಬೈಲ್ ಅತಿಬಳಕೆಯಿಂದ ಮಗುವಿನ ಚಟುವಟಿಕೆ ಅತಿಯಾಗುತ್ತದೆ. ಏಕಾಗ್ರತೆ ಇರುವುದಿಲ್ಲ. ಯಾವುದೇ ಕೆಲಸವನ್ನು ಪೂರ್ತಿಯಾಗಿ ಮಾಡಲು ಆಗುವುದಿಲ್ಲ. ಆದರೆ ಮೊಬೈಲ್ ಆಡುವಾಗ ಮಾತ್ರ ಏಕಾಗ್ರತೆ ದ್ವಿಿಗುಣಗೊಳ್ಳುತ್ತದೆ. ಮಕ್ಕಳನ್ನು ಸೆಳೆಯುವಂತಹ ಅದ್ಭುತ ಶಕ್ತಿಿ ಮೊಬೈಲ್‌ಗಿದೆ. ಯುವಜನರು ಮೊಬೈಲ್ ಮೋಹಕ್ಕೆೆ ಸಿಲುಕಿ ಮಾನಸಿಕ ಸ್ವಾಾಸ್ಥ್ಯ ಮತ್ತು ಆರೋಗ್ಯವನ್ನು ಹಾಳುಮಾಡಿಕೊಳ್ಳುತ್ತಿಿರುವುದು ಹೆಚ್ಚುತ್ತಿಿರುವಾಗಲೇ ಚಿಕ್ಕಮಕ್ಕಳೂ ಸಹ ಈ ಜಾಡ್ಯಕ್ಕೆೆ ಬಲಿಯಾಗುತ್ತಿಿರುವುದು ನಿಜಕ್ಕೂ ಆಘಾತ, ಆತಂಕಕಾರಿ ವಿಷಯ. 
ಮಕ್ಕಳನ್ನು ಮೊಬೈಲ್‌ನಿಂದ ಕಾಪಾಡಲು ಅಪಾಯಕಾರಿಯಾದ ಗೇಮ್‌ಗಳನ್ನು ಸರ್ಕಾರ ನಿಷೇಧಿಸಬೇಕಿದೆ. ಜೊತೆಗೆ ಪಾಲಕರು ಮೊಬೈಲ್‌ಗೆ ಲಾಕ್ ಅಳವಡಿಸಬೇಕು, ಮಕ್ಕಳು ಮೊಬೈಲ್‌ನಲ್ಲಿ ಆಡಲು ಸಮಯ ನಿಗದಿಪಡಿಸಬೇಕು. ಮೇಲ್ನೋೋಟಕ್ಕೆೆ ಮಾತ್ರ ಮೊಬೈಲ್ ಬಳಸಲು ಅವಕಾಶ ಕೊಡಬೇಕು. ಇದರ ಜೊತೆಗೆ ತಾವೂ ಸಹ ಎಷ್ಟು ಅವಶ್ಯವೋ ಅಷ್ಟೇ ಮೊಬೈಲ್ ಬಳಕೆಯನ್ನು ಮಾಡಿದರೆ ಇನ್ನೂ ಉತ್ತಮ. ಎಷ್ಟೋೋ ಶಾಲೆಯಲ್ಲಿ ಶಿಕ್ಷಕರೇ ಮಕ್ಕಳ ಕೈಗೆ ಮೊಬೈಲ್ ಕೊಟ್ಟು ತಮ್ಮ ಕೆಲಸ ಮಾಡಿಕೊಳ್ಳುತ್ತಾಾರೆ. ಇನ್ನೂ ಕೆಲವು ಶಾಲೆಗಳಲ್ಲಿ ಶಿಕ್ಷಕರೇ ಸದಾ ಮೊಬೈಲಿನಲ್ಲಿ ತಲ್ಲೀನರಾಗಿರುತ್ತಾಾರೆ. ಇಂತಹವುಗಳಿಗೆ ಕಡಿವಾಣ ಹಾಕುವುದು, ಮೊಬೈಲ್ ಬಳಕೆಯಿಂದಾಗುವ ದುಷ್ಪರಿಣಾಮದ ಬಗ್ಗೆೆ ಆಗಾಗ ಶಿಕ್ಷಕರು ಮಾಹಿತಿ ಕೊಡುವುದು ಇಂದಿನ ಅಗತ್ಯವಾಗಿದೆ.
ಮಕ್ಕಳಿಗೆ ತೀರಾ ಅಗತ್ಯ ಎಂದಾದಲ್ಲಿ ಬೇಸಿಕ್ ಮೊಬೈಲ್ ಕೊಡಿಸಬಹುದು. ಕಾಲೇಜು ಓದಿನವರೆಗೆ ಇದನ್ನು ಪಾಲಿಸಿದಲ್ಲಿ ಎಷ್ಟೋೋ ಮಕ್ಕಳು ಆತ್ಮಹತ್ಯೆೆ ಮಾಡಿಕೊಳ್ಳುವುದನ್ನು, ವಿವಿಧ ಚಟಗಳಿಗೆ ಬಲಿಯಾಗಿ ದಾರಿತಪ್ಪುವುದನ್ನು ತಪ್ಪಿಿಸಬಹುದಾಗಿದೆ. ಸಾಕಷ್ಟು ಕಾಲೇಜುಗಳಲ್ಲಿ ಮೊಬೈಲ್ ನಿಷೇಧ ಮಾಡಲಾಗಿದೆ. ಆದರೆ ಕಾಲೇಜಿನಿಂದ ಹೊರಬಿದ್ದ ಕ್ಷಣ ಕೈಗೆ ಮೊಬೈಲ್ ಬರುತ್ತದೆ. ಕೆಲವು ಮಕ್ಕಳು ದಾರಿಯಲ್ಲಿ ಹೋಗುವಾಗ, ಬರುವಾಗ ಮೊಬೈಲ್ ಕಿವಿಗಂಟಿಯೇ ಇರುವುದನ್ನು ದಿನನಿತ್ಯ ಕಾಣಬಹುದಾಗಿದೆ.
ಮಕ್ಕಳಿಗೆ ಅಂಟುತ್ತಿಿರುವ ಮೊಬೈಲ್ ಚಟವನ್ನು ದೂರೀಕರಿಸಲು ಜಿಲ್ಲಾಾ ಪಂಚಾಯತ್, ಶಿಕ್ಷಣ  ಮತ್ತು ಆರೋಗ್ಯ ಇಲಾಖೆ ವತಿಯಿಂದ ಜಿಲ್ಲೆೆಯಲ್ಲಿ ಮನೋವೈಜ್ಞಾಾನಿಕ ಕೌನ್ಸಿಿಲಿಂಗ್ ನಡೆಸಲು ಸರ್ವ ಸಿದ್ಧತೆ ನಡೆದಿದೆ. ಪ್ರತಿ ಶಾಲಾ-ಕಾಲೇಜಿನಲ್ಲಿ ಮಕ್ಕಳಿಗೆ ಕೌನ್ಸೆೆಲಿಂಗ್ ನಡೆಸುವ ಯೋಜನೆ ರೂಪಿಸಲಾಗಿದೆ. ಈ ಬಗ್ಗೆೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ  ಮತ್ತು ಶಿಕ್ಷಕರಿಗೆ ತಜ್ಞ ವೈದ್ಯರು ತರಬೇತಿ ಕೊಡಲಿದ್ದಾಾರೆ. ನಗರದ ಮಾನಸಿಕ ತಜ್ಞರ ತಂಡವನ್ನು ರಚಿಸಲಾಗಿದ್ದು, ಅವರೆಲ್ಲ ಶಾಲೆಯನ್ನು ನಿಗದಿ ಮಾಡಿಕೊಂಡು ಅಲ್ಲಿಗೆ ತೆರಳಿ ಮಕ್ಕಳ ಪರೀಕ್ಷೆ ನಡೆಸಲಿದ್ದಾಾರೆ. ಈ ವೇಳೆ ಶಿಕ್ಷಕರು ಮಕ್ಕಳಲ್ಲಿ ವರ್ತನೆ ಬದಲಾಗುತ್ತಿಿದ್ದರೆ ಮಾಹಿತಿ ಕೊಡಬೇಕಾಗುತ್ತದೆ.
ಮನೆಯೇ ಮೊದಲ ಪಾಠಶಾಲೆ, ಜನನಿ ತಾನೆ ಮೊದಲ ಗುರು. ಮೊಬೈಲ್‌ನಿಂದಾಗುವ ಅನಾಹುತಗಳ ಬಗ್ಗೆೆ ಪಾಲಕರು ಮೊದಲು ಜಾಗೃತರಾಗುವುದು ಒಳ್ಳೆೆಯದು. ಮನೆಯಲ್ಲಿ ಇದು ಆರಂಭವಾದರೆ ಆನಂತರ ಶಿಕ್ಷಕರು ಈ ಬಗ್ಗೆೆ ತಿಳಿವಳಿಕೆ ಮೂಡಿಸುವಲ್ಲಿ ಯಶಸ್ವಿಿಯಾಗುತ್ತಾಾರೆ. ಆದ್ದರಿಂದ ಪಾಲಕರು ಮೊಬೈಲ್‌ನಿಂದ ಮಕ್ಕಳನ್ನು ದೂರವಿಡಲೇಬೇಕಿದೆ.



ನಗರದ ಮನೋವೈದ್ಯ  ಅರವಿಂದ್ ತಿಮ್ಮಯ್ಯ ಅವರ ಪ್ರಕಾರ, ಮಕ್ಕಳು ಸಣ್ಣವರಿದ್ದಾಾಗ ರಂಪಾಟ ಮಾಡಿದರೆ, ಬಯಸಿದ್ದು ಸಿಗುತ್ತದೆ ಎಂದಾದರೆ  ಅದೇ ರಂಪಾಟವನ್ನು ಮತ್ತೆೆ ಮತ್ತೆೆ ಮುಂದುವರೆಸುತ್ತಾಾರೆ.  ಇದನ್ನು ಪಾಲಕರು ತಡೆಗಟ್ಟಬೇಕು. ಅಂದರೆ ಅವರು ಕೇಳಿದ್ದನ್ನೆೆಲ್ಲ ಕೊಡಿಸುವುದು, ಮೊಬೈಲ್ ಕೊಡಿಸುವುದನ್ನು ನಿಲ್ಲಿಸಬೇಕು. ಚಿಕ್ಕವರಿದ್ದಾಾಗಲೇ ಅವರ ಸ್ವಭಾವವನ್ನು ತಿದ್ದಬೇಕು. ಅತಿಯಾದ ಮೊಬೈಲ್ ಬಳಕೆ ಮಾಡುವ ಮಕ್ಕಳಲ್ಲಿ ವಿದ್ಯೆೆಯ ಕಲಿಕೆ ಹಿಂದೆ ಬೀಳುತ್ತದೆ. ಏಕಾಗ್ರತೆ ದೂರವಾಗುತ್ತದೆ.  ಅಸಹನೆ ಹೆಚ್ಚುತ್ತದೆ, ಆಸಕ್ತಿಿ ಕುಗ್ಗುತ್ತದೆ. ಇದನ್ನೆೆಲ್ಲ ಪೋಷಕರು ಬಾಲ್ಯದಲ್ಲೇ ಸೂಕ್ಷ್ಮವಾಗಿ ಗಮನಿಸಬೇಕು. ಇಲ್ಲವಾದಲ್ಲಿ ಮುಂದೆ ಮಗು ಮೊಬೈಲ್ ಕೈಯ್ಯಲ್ಲಿ ಇಲ್ಲದೆ ಬದುಕಲಾರದ ಸ್ಥಿಿತಿ ತಲುಪಬಹುದು ಎನುವ ಆತಂಕ ವ್ಯಕ್ತಪಡಿಸುತ್ತಾಾರೆ.

ಇನ್ನೊೊಬ್ಬ ಮನೋವೈದ್ಯ ಪ್ರಮೋದ್ ಹೇಳುವಂತೆ, ಮೊಬೈಲ್ ಗೀಳಿಗೆ ಬಲಿಯಾಗುವ ಮಕ್ಕಳು ಇನ್ನೊೊಬ್ಬರ ಜೊತೆ ಬೆರೆಯುವುದಿಲ್ಲ. ಒಂಟಿಯಾಗಿ ಕುಳಿತು ಮೊಬೈಲ್‌ನಲ್ಲಿ ತಲ್ಲೀನರಾಗುತ್ತಾಾರೆ. ಮೆದುಳಿನ ಮೇಲೆ ಮೊಬೈಲ್‌ನ ವಿಕಿರಣ ಪರಿಣಾಮ ಬೀರುತ್ತದೆ. ತಲೆನೋವು ಮಾತ್ರವಲ್ಲ, ಟ್ಯೂಮರ್ ಕೂಡ ಆಗಬಹುದು, ಮೆದುಳಿನ ಬೆಳವಣಿಗೆಗೆ ಅಡ್ಡಿಿಯಾಗಬಹುದು, ಕೆಟ್ಟ ದೃಶ್ಯ ಹಾಗೂ ಅಶ್ಲೀಲ ಚಿತ್ರಗಳನ್ನು ನೋಡಿ ಅದರ ಪ್ರಭಾವಕ್ಕೆೆ ಒಳಗಾಗಬಹುದು ಎನ್ನುತ್ತಾಾರೆ.


ಉತ್ತರ ಪ್ರದೇಶದ ರಾಯ್‌ಬರೇಲಿಯಲ್ಲಿ 3 ವರ್ಷದ ಮಗು ಮೊಬೈಲನ್ನು 8 ತಾಸು ಪ್ರತಿದಿನ ಹಿಡಿದು ಅದರಲ್ಲೇ ತಲ್ಲೀನವಾಗುತ್ತಿಿದೆ. ಎಲ್ಲಿಯವರೆಗೆ ಎಂದರೆ
ರಾತ್ರಿಿ ಮಲಗುವಾಗಲೂ ಮೊಬೈಲ್ ದರ ಕೈಯ್ಯಲ್ಲೇ ಇರುತ್ತಿಿತ್ತು. ರಾತ್ರಿಿ ಎದ್ದು ಮೂತ್ರಕ್ಕೆೆ ಹೋದರೆ  ಪೋಷಕರು ಮೊಬೈಲ್ ಅಡಗಿಸಿಬಿಡುತ್ತಾಾರೆ ಎಂದು ಮಗು ಮೂತ್ರಕ್ಕೂ ಹೋಗದೆ ಹಾಸಿಗೆಯಲ್ಲೇ ಮೂತ್ರ ಮಾಡುತ್ತಿಿತ್ತು.  ಈ ರೀತಿ ಅದರ ಮೋಡಿಗೆ ಒಳಗಾಗಿತ್ತು ಮಗು.  ಮನೆಗೆಲಸಕ್ಕೆೆ ಅಡ್ಡಿಿಯಾಗಬಾರದು, ಅವರ ಹಠ ಕಡಿಮೆಯಾಗಬೇಕೆಂಬ ಉದ್ದೇಶದಿಂದ ಅಥವಾ ಅತಿ ಪ್ರೀತಿಯಿಂದ ಮಕ್ಕಳ ಕೈಗೆ ಮೊಬೈಲ್ ಹಿಡಿಸಿಬಿಡುವ ಪಾಲಕರು, ಆನಂತರ ಅದನ್ನು ವಾಪಸ್ ಪಡೆಯಲು ಹರಸಾಹಸ ಪಡಬೇಕಿದೆ. ಈಗ ಇದೇ ಅವರಿಗೆ ಮುಳುವಾಗಿ ಪರಿಣಮಿಸುತ್ತಿಿದೆ.
 published on 16-9.2019

Tuesday, 10 September 2019

ಕಾನನ ಸೇನಾನಿಗಳಿಗೆ ಒಂದು ಸಲಾಂ



 ನಾಳೆ ಸೆಪ್ಟೆೆಂಬರ್ 11 ರ್ಟ್ರೋಯ ಅರಣ್ಯ ಹುತಾತ್ಮರ ದಿನ. ಅರಣ್ಯ ಮತ್ತು ವನ್ಯಜೀ"ಗಳ ಸಂರಕ್ಷಣೆಗಾಗಿ ಇವರು ಮಾಡಿದ ತ್ಯಾಾಗ ಮತ್ತು ಬಲಿದಾನವನ್ನು ಸ್ಮರಿಸಲು ಈ ದಿನವನ್ನು ಆಚರಿಸಲಾಗುತ್ತಿಿದೆ. ನಗರದ ಶ್ರೀಗಂಧ ಕೋಠಿಯಲ್ಲಿ ಈ ನಿ"ುತ್ತ ನಾಳೆ ಬೆಳಿಗ್ಗೆೆ 9 ಗಂಟೆಗೆ ಕಾರ‌್ಯಕ್ರಮ ಏರ್ಪಾಡಾಗಿದೆ.  




ಅರಣ್ಯ ಇಲಾಖೆಯ ಸಿಬ್ಬಂದಿ ದೇಶದ  ಅರಣ್ಯ ಮತ್ತು ವನ್ಯಜೀ"ಗಳ ಸಂರಕ್ಷಣೆಗಾಗಿ  ಮಾಡಿದ ತ್ಯಾಾಗ ಮತ್ತು ಬಲಿದಾನಗಳ "ನ್ನೆೆಲೆಯಲ್ಲಿ ಅವರ ಸ್ಮರಣೆಗಾಗಿ ರ್ಟ್ರೋಯ ಅರಣ್ಯ ಹುತಾತ್ಮರ ದಿನವನ್ನು ಪ್ರತಿವರ್ಷ ಸೆಪ್ಟೆೆಂಬರ್ 11ರಂದು ಆಚರಿಸಲಾಗುತ್ತಿಿದೆ.
ಅರಣ್ಯ ಸಂಪತ್ತನ್ನು ಮತ್ತು ವನ್ಯಜೀ"ಗಳನ್ನು ಉಳಿಸಲು ತಮ್ಮ ಪ್ರಾಾಣವನ್ನೇ ಸಮರ್ಪಿಸಿ ಸರ್ವೋಚ್ಛ ತ್ಯಾಾಗ ಮೆರೆದ, ಸಮರ್ಪಣಾ ಮನೋಭಾವದ ಹಲವಾರು ಅರಣ್ಯಾಾಧಿಕಾರಿಗಳನ್ನು ಈ ಸಂದರ್ಭದಲ್ಲಿ ಸ್ಮರಿಸಲಾಗುತ್ತದೆ. ಕರ್ನಾಟಕದಲ್ಲಿ ಇಂದಿಗೂ ಹಲವು ಅರಣ್ಯಾಾಧಿಕಾರಿಗಳು ಇಂತಹ ಬಲಿದಾನದಿಂದ ಹೆಸರಾಗಿದ್ದಾಾರೆ. ಇವರ ಅಸಾಧಾರಣ ಪ್ರಯತ್ನಗಳು, ಧೈರ್ಯಶೀಲ ಕಾರ‌್ಯಗಳು, ಅಪಾಯಕ್ಕೆೆ ಒಳಗಾದ ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಹಾಗೂ ವನ್ಯಜೀ"ಗಳನ್ನು ಸಂರಕ್ಷಿಸಲು, ಕಾಪಾಡಲು ಯುವಪೀಳಿಗೆಗೆ ಇದು ಸ್ಫೂರ್ತಿದಾಯಕವಾಗಿದೆ.
ಮರಗಳ್ಳರು, ಕಳ್ಳಸಾಗಾಣಿಕೆದಾರರು, ಬೇಟೆಗಾರರು, ಕಾಡ್ಗಿಿಚ್ಚು ಮೊದಲಾದವುಗಳಿಂದ ಅರಣ್ಯವನ್ನು ಸಂರಕ್ಷಿಸುವುದು ಇಂದು ಸವಾಲಿನ ಕೆಲಸವಾಗಿದೆ. ದಟ್ಟಕಾನನದ ಮಧ್ಯೆೆ ಅರಣ್ಯ ಸಿಬ್ಬಂದಿಗಳು ಮತ್ತು ಅಧಿಕಾರಿಗಳು ಸದಾ ಗಮನ"ಡಬೇಕಿದೆ. ಇಂತಹ ಸ್ಥಿಿತಿಯಲ್ಲಿ ಮಳೆ, ಚಳಿ, ಬಿಸಿಲೆನ್ನದೆ ಎದುರಾಗುವ ಎಲ್ಲಾಾ ಅಪಾಯಗಳನ್ನೆೆದುರಿಸಲು ಸನ್ನದ್ಧರಾಗಿರಬೇಕಾಗುತ್ತದೆ. 
1730ರ ಸೆ. 11ರಂದು ಜೋಧಪುರ್‌ನ ಮಹಾರಾಜ ಅಭಯ್ ಸಿಂಗ್‌ನ ಸೈನಿಕರು ಕೇಜರ್ಲಿ ಎಂಬ ಪ್ರಾಾಂತ್ಯದಲ್ಲಿ ಬೆಳೆದಿದ್ದ ಮರಗಳನ್ನು  ತನ್ನ ಹೊಸ ಅರಮನೆಗೆ ಬೇಕೆಂದು ಕಡಿಯಲು ಕಳು"ಸಿದ್ದನು. ಇದನ್ನು "ರೋಧಿಸಿದ್ದ ಬಿಷ್ಣೋು ಸಮಾಜದ 263 ಪುರುಷ, ಮ"ಳೆ ಮತ್ತು ಮಕ್ಕಳನ್ನು ಈ ಸಂದರ್ಭದಲ್ಲಿ ಆತನ ಸೈನಿಕರು ಕೊಂದು ಹಾಕಿದ್ದರು. ಮರಗಳ ಸಂರಕ್ಷಣೆಗಾಗಿ ಪ್ರಾಾಣಾರ್ಪಣೆ ಮಾಡಿದ  ಬಿಷ್ಣೋುಗಳ  ತ್ಯಾಾಗ ಮತ್ತು ಬಲಿದಾನವನ್ನು ಸ್ಮರಿಸಲು ಈ ದಿನ ಆಚರಿಸಲಾಗುತ್ತಿಿದೆ.
ಕರ್ನಾಟಕದಲ್ಲಿ ಇಂತಹ ಸಾಹಸ ಮೆರೆದ  ಐಎಫ್‌ಎಸ್ ಅಧಿಕಾರಿ ಪಿ. ಶ್ರೀನಿವಾಸ್,  ಎಸ್. ಮಣಿಕಂಠನ್, ಕೊಳ್ಳೆೆಗಾಲದ ಅರಣ್ಯ ರಕ್ಷಕ ಬಿ. ಸಿ. ಮೋಹನಯ್ಯ ಮತ್ತು ಶಿರಸಿಯ ಡಿಫ್‌ಓ ಆಗಿದ್ದ ಅರ"ಂದ್ ಹೆಗಡೆ ಸ"ತ ಹಲವರನ್ನು  ಇಂದಿಗೂ ಸ್ಮರಿಸಲಾಗುತ್ತಿಿದೆ. ಶ್ರೀನಿವಾಸ್ ಅವರು ಕಾಡಿಗಾಗಿ ಜನನ, ಕಾಡಿಗಾಗಿ ಜೀವನ ಮತ್ತು ಕಾಡಿಗಾಗಿ ಮರಣ ಎಂಬ ತತ್ವವನ್ನು ಹೊಂದಿದವರಾಗಿದ್ದರು. ಕರ್ನಾಟಕ ಅರಣ್ಯ ಇಲಾಖೆಯ ಅಭಿಮನ್ಯು ಎಂದೇ ಹೆಸರಾಗಿದ್ದರು. ದಂತಚೋರ "ೀರಪ್ಪನ್ ಮತ್ತು ಆತನ ಸಹಚರರು ಶ್ರೀನಿವಾಸ್ ಅವರನ್ನು ನಯವಂಚನೆಯ ಜಾಲದಲ್ಲಿ ಸಿಲುಕಿಸಿ 1991ರ ನವೆಂಬರ್ 10ರಂದು ಕೊಲೆ ಮಾಡಿದರು. ಶ್ರೀನಿವಾಸ್ ಅವರ ಕಾರ‌್ಯದಕ್ಷತೆಯನ್ನು ಮೆಚ್ಚಿಿ ಭಾರತ ಸರ್ಕಾರ ಮರಣೋತ್ತರವಾಗಿ ಕೀರ್ತಿಚಕ್ರ ಪ್ರಶಸ್ತಿಿ ನೀಡಿದೆ.
"ೀರಪ್ಪನ್‌ನ ವಂಚನೆುಂದ ಕೊಳ್ಳೆೆಗಾಲದ ಅರಣ್ಯ ರಕ್ಷಕ ಬಿ. ಸಿ. ಮೋಹನಯ್ಯ ಮತ್ತು ಮರಗಳ್ಳರ ಕ್ರೌೌರ‌್ಯಕ್ಕೆೆ ಅರ"ಂದ್ ಹೆಗಡೆ ಜೀವಕಳೆದುಕೊಂಡಿದ್ದಾಾರೆ. ಕಾವೇರಿ ವನ್ಯಜೀ" "ಬಾಗದ ಅರಣ್ಯ "ೀಕ್ಷಕ ದೊಡ್ಡಶೆಟ್ಟಿಿ ಎನ್ನುವವರು ರೈತರ ಅಪಾರ ಆಸ್ತಿಿಯನ್ನು ನಾಶ ಮಾಡುತ್ತಿಿದ್ದ ಕಾಡಾನೆಯನ್ನು ಅರಣ್ಯಕ್ಕೆೆ "ಮ್ಮೆೆಟ್ಟಿಿಸಲು ಹೋದಾಗ ಇತರ ಕಾಡಾನೆಗಳು ಅವರ ಮೇಲೆರಗಿ ತುಳಿದು ಸಾುಸಿದ್ದರಿಂದ ಹುತಾತ್ಮರಾಗಿದ್ದಾಾರೆ. ಕೆಲಸದ ವೇಳೆ ಧೈರ‌್ಯದಿಂದ ಪ್ರಾಾಣತ್ಯಾಾಗ ಮಾಡಿದ ಅವರ ಸೇವೆ ಅ"ಸ್ಮರಣಿಯ. ಇವರ ಮಗನಿಗೆ ಅನುಕಂಪದ ಆಧಾರದಲ್ಲಿ ಸರಕಾರ ಕೆಲಸ ನೀಡಿದೆ. ಮತ್ತು ಕುಟುಂಬಕ್ಕೆೆ 5 ಲಕ್ಷ ರೂ. ಪರಿಹಾರ ಧನ ನೀಡಿದೆ.
2017ರ ಫ್ರೆುವರಿ 18ರಂದು  ಬಂಡಿಪುರ ಹುಲಿಸಂರಕ್ಷಿತ ಪ್ರದೇಶದ ಕಲ್ಕೆೆರೆ ಎಂಬಲ್ಲಿ ಕಾಡ್ಗಿಿಚ್ಚು ಆರಿಸುವ ಕೆಲಸದಲ್ಲ್ಲ್‌ಿ ನಿರತರಾಗಿದ್ದ ಮುರಿಗೆಪ್ಪ ತಮ್ಮನಗೋಳ್ ಎನ್ನುವವರು ಸುತ್ತಲೂ ಬೆಂಕಿ ಏಕಾಏಕಿ ಆವರಿಸಿದ್ದರಿಂದ ಉಸಿರುಗಟ್ಟಿಿ ಸಾವನ್ನಪ್ಪಿಿದ್ದಾಾರೆ. ಇವರ ಕುಟುಂಬಕ್ಕೆೆ  25 ಲಕ್ಷ ರೂ. ಪರಿಹಾರ ಕೊಡಲಾಗಿದೆ. ಅವರ ಪತ್ನಿಿಗೆ ಅನುಕಂಪದ ಆಧಾರದಲ್ಲಿ ಉದ್ಯೋೋಗ ಕೊಡಲಾಗಿದೆ.
2018ರ ಮಾರ್ಚ 3ರಂದು ನಾಗರಹೊಳೆ ಹುಲಿ ರಕ್ಷಿತಾರಣ್ಯದಲ್ಲಿ ಫೈರ್‌ಲೈನ್ ಕೆಲಸ ನಡೆಯುತ್ತಿಿದ್ದುದನ್ನು ಪರಿಶೀಲಿಸಲು ಹೋಗಿದ್ದ ಐಎಫ್‌ಎಸ್ ಅಧಿಕಾರಿ ಮಣಿಕಂಠನ್ ಆನೆ ದಾಳಿಗೆ ಸಿಲುಕಿ ಸಾವುಕಂಡಿದ್ದಾಾರೆ.
ಇದೇ ರೀತಿ ಈ ಎಲ್ಲ ಅರಣ್ಯ ಹುತಾತ್ಮರನ್ನು ಸ್ಮರಿಸುವ ದಿನ ಇದಾಗಿದೆ. ವನ್ಯಜೀ"ಗಳ ಸಂರಕ್ಷಣೆಗಾಗಿ ತಮ್ಮ ಬದುಕನ್ನೇ ಮುಡುಪಾಗಿಟ್ಟವರು ಇವರು. ಕಳ್ಳಸಾಗಾಣಿಕದಾರರ, ಮರಗಳ್ಳರ, ದಂತಚೋರರ "ರುದ್ಧ ಕೆಚ್ಚೆೆದೆುಂದ ಹೋರಾಡಿದವರು. ಈ ದಿನಾಚರಣೆಯನ್ನು ಎಲ್ಲಾಾ ಜಿಲ್ಲಾಾ ಕೇಂದ್ರದಲ್ಲಿ ಆಚರಿಸಲಾಗುತ್ತಿಿದೆ.
ಇವರ ಕುಟುಂಬಗಳಿಗೆ ನೆರವಾಗಲು ಹುತಾತ್ಮರ ದಿನಾಚರಣೆ ಸ"ುತಿ ರಚಿಸಲಾಗಿದೆ. ಈ ಸ"ುತಿಯು ದೇಣಿಗೆಗಳನ್ನು ಸಂಗ್ರ"ಸಿ ಹುತಾತ್ಮರ ಅವಲಂಬಿತರ ಏಳಿಗೆಗೆ ನೀಡುತ್ತಿಿದೆ. ಜೊತೆಗೆ ಹುತಾತ್ಮರ ಮಕ್ಕಳಿಗೆ ಶಿಕ್ಷಣ, "ದ್ಯಾಾರ್ಥಿ ವೇತನವನ್ನೂ ಸಹ ಕೊಡುತ್ತಿಿದೆ.  ಈ ಎಲ್ಲ ಹುತಾತ್ಮರ ನೆನಪಿನಲ್ಲಿ ಕಾನನ ಸೇನಾನಿಗಳು ಎಂಬ ಆಡಿಯೋ ಸಿ ಡಿ ಸಹ ರಚಿಸಲಾಗಿದೆ. ಇವರ ಬಗ್ಗೆೆ ಸಿನಿಮಾ ತಯಾರಿಸುವ ಪ್ರಸ್ತಾಾವನೆ ಸಹ ಸರಕಾರದ ಮುಂದಿದೆ.
published on 10.9.2019
..................................
          

Saturday, 7 September 2019

ಶಿಕ್ಷಕ ಇಂದಿಗೂ ಭರವಸೆಯ ಬೆಳಕು





ಪರಿವರ್ತನೆ ಜಗದ ನಿಯಮ. ಇದು ಶಿಕ್ಷಣ ಕ್ಷೇತ್ರಕ್ಕೂ ಅನ್ವಯವಾಗುತ್ತದೆ. ಪ್ರಕೃತಿ ಹೇಗೆ ಬದಲಾಗುತ್ತಿಿರುತ್ತದೆಯೋ ಹಾಗೆಯೇ ಶಿಕ್ಷಣವೂ ಕೂಡ. ಇಂದಿನ ಶಿಕ್ಷಕರು ಹೊಸ ಬದಲಾವಣೆಗೆ ತಮ್ಮನ್ನು ತೆರೆದುಕೊಂಡು ಹೊಸತನದತ್ತ ದಾಪುಗಾಲಿರಿಸಬೇಕಿದೆ. ಏಕೆಂದರೆ, ಇದು ತಂತ್ರಜ್ಞಾಾನದ ಕಾಲ. ದಿನೇ ದಿನೇ ಆಶ್ಚರ್ಯವೆನಿಸುವ ಬೆಳವಣಿಗೆಗಳು ನಡೆಯುತ್ತಿಿವೆ. ಶಿಕ್ಷಕರೂ ಸಹ ನಿರಂತರ "ದ್ಯಾಾರ್ಥಿಯಾಗಿದ್ದು, ಕಲಿಸುವುದರ ಜೊತೆಗೆ ಕಲಿಯುವ ಜವಾಬ್ದಾಾರಿಯನ್ನೂ ಹೊಂದಿರಬೇಕು. ಶಿಕ್ಷಕ ಎನ್ನುವುದು ಕೇವಲ ಒಂದು ಹುದ್ದೆೆಯಲ್ಲ. ಮಕ್ಕಳ ಭ"ಷ್ಯವನ್ನು ರೂಪಿಸುವ ಒಂದು ದೊಡ್ಡ ಅವಕಾಶ. ಆದ್ದರಿಂದಲೇ ಇತರ ಎಲ್ಲಾಾ ವೃತ್ತಿಿಗಳಿಗಿಂತ ಇದು ಅತ್ಯಂತ ಶ್ರೇಷ್ಠ ಮತ್ತು ಪ"ತ್ರ. ನಾಳೆ ಸೆಪ್ಟೆೆಂಬರ್ 5, ಶಿಕ್ಷಕರ ದಿನಾಚರಣೆ. ಈ "ನ್ನೆೆಲೆಯಲ್ಲಿ ಶಿಕ್ಷಕರ ಬಗ್ಗೆೆ ಒಂದು ಅವಲೋಕನ.






ನಾನು ಗುರು"ಗೆ ಮೊದಲ ಪೂಜೆಯನ್ನು ಮಾಡುತ್ತೇನೆ. ಏಕೆಂದರೆ, ಅವರು ನನಗೆ ದೇವರು ಮತ್ತು ಮೋಕ್ಷದ ದಾರಿಯನ್ನು ತೋರಿಸಿದವರು-- ಸಂತ ಕಬೀರರು.
ನಾನು ಪಡೆದ ಪ್ರಶಸ್ತಿಿ  ಮತ್ತು ಹುದ್ದೆೆಗಳಲ್ಲಿ ಶಿಕ್ಷಕ ವೃತ್ತಿಿಯೇ ಶ್ರೇಷ್ಠವಾದುದು- ಸರ್ವಪಲ್ಲಿ ರಾಧಾಕೃಷ್ಣನ್.
ನಾನು ನನ್ನ ತಂದೆುಂದ ನಶ್ವರ ಶರೀರ ಪಡೆದೆ. ಆದರೆ ಗುರು ಅರಿಸ್ಟಾಾಟಲ್ ಮೂಲಕ ಅಮರ ಜೀವ ಪಡೆದೆ. ನನ್ನ ತಂದೆ ನನ್ನನ್ನು ಆಕಾಶದಿಂದ ಭೂಮಂಡಲಕ್ಕೆೆ ತಂದಿಟ್ಟರು, ನನ್ನ ಗುರು ನನ್ನನ್ನು ಭೂ"ುುಂದ ಆಕಾಶದೆತ್ತರಕ್ಕೆೆ ಏರಿಸಿದರು. ನನ್ನ ತಂದೆಯನ್ನು ನಾನು ಪ್ರೀತಿಸುತ್ತೇನೆ, ನನ್ನ ಗುರುವನ್ನು ನಾನು ಗೌರ"ಸುತ್ತೇನೆ- ಅರಿಸ್ಟಾಾಟಲ್ .
ನಮ್ಮ ಪರಂಪರೆಯಲ್ಲಿ ಗುರು"ಗೆ ಮಹತ್ವದ ಸ್ಥಾಾನ"ದೆ. ನಮಗೆ ಒಂದಲ್ಲ ಒಂದು ರೀತಿಯಲ್ಲಿ ಮಾರ್ಗದರ್ಶನದ ಅವಶ್ಯಕತೆ ಇದೆ. ಈ ಮಹತ್ವದ ಸ್ಥಾಾನವನ್ನು ತುಂಬುವವರನ್ನೇ ಗುರು ಎನ್ನುತ್ತೇವೆ. ಪ್ರಾಾಚೀನ ಕಾಲದಿಂದಲೂ  ಭಕ್ತಿಿ, ಗೌರವ ಮತ್ತು ಕೃತಜ್ಞತೆುಂದ ಸ್ಮರಿಸುವ ಗುಣ ನಮ್ಮ ಸಂಸ್ಕೃತಿಯಲ್ಲಿ ಅಂತರ್ ವಾ"ನಿಯಾಗಿ ಬಂದಿದೆ. ಪುರಂದರದಾಸರು ಇದನ್ನೇ ಗುರು"ನ ಗುಲಾಮನಾಗದ ತನಕ ದೊರೆಯದಣ್ಣ ಮುಕುತಿ ಎಂದರು.
ಒಂದಕ್ಷರ ಕಲಿಸಿದಾತನೂ ಗುರು ಎಂಬ ಮಾತಿದೆ. ನಾವು ಜ್ಞಾಾನವನ್ನು ಯಾರಿಂದಲಾದರೂ, ಯಾವ ಸಂದರ್ಭದಲ್ಲಾಾದರೂ ಪಡೆಯಬಹುದು. ಗುರು -ಶಿಷ್ಯ ಸಂಬಂಧವೆಂದರೆ ಒಬ್ಬರ ಜೀವನವನ್ನು ಮತ್ತೊೊಬ್ಬರು ಪ್ರಭಾ"ಸುವುದು. ಇಲ್ಲಿ ವಂಚನೆ, ಮೇಲು-ಕೀಳು, ಸಣ್ಣತನ, ಸಂಕೋಚ"ಲ್ಲ. ಅ"ನಾಭಾವ ಸಂಬಂಧ"ದೆ. ಟಿ. ಎಸ್. ವೆಂಕಣ್ಣಯ್ಯ- ಕುವೆಂಪು ಅವರ ಗುರು ಶಿಷ್ಯರ ಸಂಬಂಧ ಸದಾ ನೆನಪಾಗುತ್ತದೆ. ಶ್ರೀರಾಮಾಯಣದರ್ಶನಂ ಕೃತಿಯನ್ನೇ ಕುವೆಂಪು ತಮ್ಮ ಗುರು ವೆಂಕಣ್ಣಯ್ಯ ಅವರಿಗೆ ಅರ್ಪಿಸಿ ಗೌರವ ತೋರಿಸಿದ್ದಾಾರೆ. ಅಂದು ಗುರು ವೆಂಕಣ್ಣಯ್ಯ ಅವರನ್ನು ಸ್ವತಃ "ದ್ಯಾಾರ್ಥಿಗಳೇ ಸಾರೋಟಿನಲ್ಲಿ ಕೂಡ್ರಿಿಸಿ ಎಳೆದು ಕರೆತಂದಿದ್ದರಂತೆ. ಅಂದರೆ ಇಲ್ಲಿ ಅವರ ಹೃದಯದಿಂದ ಹರಿದುಬಂದ ಗುರುಪ್ರೇಮ ವ್ಯಕ್ತವಾಗುತ್ತದೆ. ಇಂತಹ ನಿರ‌್ಮಲ ಗುರುಪ್ರೇಮದ ಧಾರೆ ಜೀವಂತವಾಗಿ ಇಂದಿಗೂ ಹರಿದುಬರುತ್ತಿಿದೆ. ಈ ಮೂಲಕ ಗುರುವನ್ನು ಭಕ್ತಿಿ- ಗೌರವದಿಂದ ಕಾಣಲಾಗುತ್ತಿಿದೆ.
ಶಿಕ್ಷಕ ತನ್ನ ಬಾಳನ್ನು ಮೇಣದಂತೆ ಕರಗಿಸಿಕೊಂಡು ಇನ್ನೊೊಬ್ಬರಿಗೆ ಬೆಳಕು ಕೊಡುತ್ತಾಾನೆ ಎಂಬ ಮಾತಿದೆ. ಇದು ನಿಜ. ಅಸಂಖ್ಯಾಾತ "ದ್ಯಾಾರ್ಥಿಗಳ ಬಾಳನ್ನು ತಮ್ಮ ಸೇವಾವಧಿಯಲ್ಲಿ ಬೆಳಗುತ್ತಾಾರೆ. ಇದು ಕೇವಲ ಶಿಕ್ಷಕರಿಂದ ಮಾತ್ರ ಸಾಧ್ಯ ಎನ್ನುವುದನ್ನು ಮರೆಯಲಾಗದು. ಅರ್ಥಪೂರ್ಣ ಬದುಕಿನಲ್ಲಿ ಶ್ರೇಯಸ್ಸನ್ನು ಸಾಧಿಸಲು ಮುಂದೆ ಗುರಿ ಎಷ್ಟು ಮುಖ್ಯವೋ ಅಷ್ಟೇ "ಂದೆ ನಿಂತ ಗುರುವೂ ಮುಖ್ಯ.
ವ್ಯಕ್ತಿಿಯ ವ್ಯಕ್ತಿಿತ್ವ ನಿರ್ಮಾಾಣದಲ್ಲಿ ಶಿಕ್ಷಕ ನಿಜವಾದ ಶಿಲ್ಪಿಿ. ದೇಶದ ಭ"ಷ್ಯವನ್ನು ನಿರ್ಮಿಿಸುವ ರೂವಾರಿ ಕೂಡ. ತಪ್ಪು ಮಾಡಿದ "ದ್ಯಾಾರ್ಥಿಗಳನ್ನು ಸರಿದಾರಿಗೆ ತರಬೇಕಾದ ಜವಾಬ್ದಾಾರಿ ಶಿಕ್ಷಕರದ್ದು. ಶಿಕ್ಷಕರು ಏಣಿುದ್ದಂತೆ. ಇದು ಪ್ರತಿಯೊಬ್ಬರೂ ಮೇಲೇರಲು ಸಾಧ್ಯವಾಗುವಂತಹುದು. ಏಣಿ ಯಾವಾಗಲೂ ಇದ್ದಲ್ಲಿಯೇ ಇರುತ್ತದೆ. ಆದರೆ ಅನೇಕರು ಇದನ್ನು ಏರಿ ಸಾಧಕರಾಗುತ್ತಾಾರೆ.
ಸರ್ವಪಲ್ಲಿ ರಾಧಾಕೃಷ್ಣ ಅವರು ಹೇಳುವಂತೆ- ಶಿಕ್ಷಕರು ಸ್ನೇಹ, ಗೌರವ, ಘನತೆಗಳಿಂದ ವರ್ತಿಸುವವರು. ಪ್ರಸ್ತುತ ದಿನಮಾನಗಳಲ್ಲಿ ಶಿಕ್ಷಣ ಎನ್ನುವುದು ಸೇವೆಯ, ಸಮರ್ಪಣಾ ಮನೋಭಾವದ ಅಥವಾ ಜ್ಞಾಾನದಾಸೋಹದ ಕೇಂದ್ರವಾಗಿ ಉಳಿದಿಲ್ಲ. ಲಾಭದಾಯಕ ಉದ್ದಿಮೆಯಾಗಿ ಮಾರ್ಪಟ್ಟಿಿದೆ. ಇದಕ್ಕೆೆ ತಕ್ಕಂತೆ ಶಿಕ್ಷಕರ ಮನೋಧರ್ಮ ಕೂಡ ಬದಲಾಗತೊಡಗಿದೆ. ವೃತ್ತಿಿಯ "ಂದಿನ ಮೌಲ್ಯ ಕಡಿಮೆಯಾಗತೊಡಗಿದೆ. ಹಣವೇ ಎಲ್ಲವೂ ಆಗತೊಡಗಿದೆ. ಆದರ್ಶ ಮತ್ತು ಮಾದರಿ ಎನ್ನುವುದು ಕನಸಾಗತೊಡಗಿದೆ. ಸೃಜನಶೀಲತೆ ಶಿಕ್ಷಕರಲ್ಲಿ ಮಾಯವಾಗುತ್ತಿಿದೆ.
 ಶಿಕ್ಷಕ ಕೇವಲ ಪಾಠಾನುಭ"ಯಾಗದೆ, ಲೋಕಾನುಭ"ಯಾಗಬೇಕು. ಜ್ಞಾಾನ ದಾನ ಮಾಡಬೇಕಾದ ಶಿಕ್ಷಕನಿಗೆ ಉಳಿದೆಲ್ಲರಿಗಿಂತ ಹೆಚ್ಚಿಿನ ಜ್ಞಾಾನ ಅಗತ್ಯ. ಶಿಕ್ಷಕನೆಂದರೆ ಒಂದರ್ಥದಲ್ಲಿ ಜ್ಞಾಾನಕೋಶ. ಇದನ್ನು ಕಾಪಾಡಿಕೊಳ್ಳಬೇಕಾದರೆ ಮೊದಲು ಅವನಿಗೆ ವೃತ್ತಿಿಗೌರವ ಮುಖ್ಯ. ಇದರಿಂದ ಇಡೀ ಸಮುದಾಯವೇ ಆತನನ್ನು ಗೌರ"ಸುತ್ತದೆ ಎನ್ನುವುದನ್ನು ಯಾವ ಕಾರಣಕ್ಕೂ ಮರೆಯಬಾರದು.
ಶಿಕ್ಷಕರು ಇಂದಿಗೂ ಸಹ ಭರವಸೆಯ ಬೆಳಕು.  ಅವರು ನಿಷ್ಠೆುಂದ ಸೇವೆ ಸಲ್ಲಿಸಿದರೆ ದೇಶದ ನವನಿರ್ಮಾಾಣ ಸಾಧ್ಯ"ದೆ. ಶೀಲ, ಚಾರಿತ್ರ್ಯಶುದ್ಧಿಿ ವ್ಯಕ್ತಿಿಯನ್ನು ನಿರ್ಮಾಾಣ ಮಾಡಬೇಕಿದೆ. ವೃತ್ತಿಿ ನಿಷ್ಠೆೆಯನ್ನು ಬೆಳೆಸಿಕೊಳ್ಳಬೇಕಾದುದು ಶಿಕ್ಷಕರ ಕರ್ತವ್ಯ ಕೂಡ. ಪ್ರಾಾಮಾಣಿಕತೆ, ಕ್ರಿಿಯಾಶೀಲತೆ, ಸಹನಶೀಲತೆ ಮತ್ತು ಕರ್ತವ್ಯಬದ್ಧತೆ ಶಿಕ್ಷಕರಿಗೆ ಅತ್ಯವಶ್ಯ. ಈ ನಾಲ್ಕು ಗುಣಗಳನ್ನು  ಮೈಗೂಡಿಸಿಕೊಂಡರೆ ಆತ ಉತ್ತಮ ಶಿಕ್ಷಕನಾಗಬಲ್ಲ. ರಾಷ್ಟ್ರದ ಬದುಕಿಗೆ ಉಸಿರಾಗಿರುವ ಶಿಕ್ಷಕರು ಮಕ್ಕಳನ್ನು ಸರಿಯಾದ ಮಾರ್ಗದಲ್ಲಿ ಕೊಂಡೊಯ್ಯದಿದ್ದರೆ ಆ ಮಕ್ಕಳ ಭ"ಷ್ಯವೇ ಹಾಳಾಗುತ್ತದೆ. ಇವೆಲ್ಲವುಗಳನ್ನು ಸೇವೆಯ ಹಾದಿಯ ದೀಪಗಳನ್ನಾಾಗಿ ಮಾಡಿಕೊಳ್ಳುವುದು ಪ್ರಮುಖ ಕರ್ತವ್ಯ. ಶಿಕ್ಷಕನಾದವ ಇದನ್ನೆೆಲ್ಲ ಮೈಗೂಡಿಸಿಕೊಳ್ಳಬೇಕು. ಈ ಮಾತು ಕೊಳಲ ಮೇಲೆ ಸುಳಿದ ಗಾಳಿಯಂತಾಗದೆ, ಕೊಳಲೊಳಗಿಳಿದ ಮಧುರ ಇನಿದನಿಯಾಗಿ ಹೊರಹೊಮ್ಮಬೇಕು.
ಕೆಲವು ಆಪಾದನೆಗಳನ್ನು ಹೊರತುಪಡಿಸಿದರೆ, ಶಿಕ್ಷಕ ವೃಂದ  ಶಿಕ್ಷಣ ವ್ಯವಸ್ಥೆೆಯನ್ನು ಗಟ್ಟಿಿಗೊಳಿಸುತ್ತಿಿದೆ. "ಂದಿನ ಸ್ಥಿಿತಿ ಈಗಿಲ್ಲ. ಈಗ ಬರುವವರು ಬಹುತೇಕ ಉನ್ನತ ವ್ಯಾಾಸಂಗ ಮಾಡಿರುವವರಾಗಿರುವುದರಿಂದ  ತಂತ್ರಜ್ಞಾಾನಕ್ಕೆೆ ತಕ್ಕಂತೆ ಹೊಂದಿಕೊಳ್ಳುತ್ತಿಿದ್ದಾಾರೆ. ಮೌಢ್ಯ ಮತ್ತು ಕಂದಾಚಾರವನ್ನು ಹೊಡೆದೋಡಿಸುವ  ಪ್ರಮುಖ ಕೆಲಸವನ್ನು ಮಾಡುವುದರ ಜೊತೆಗೆ ವೈಜ್ಞಾಾನಿಕವಾಗಿಯೂ ತಮ್ಮ ಮನೋ"ಕಾಸವನ್ನು ಮಾಡಿಕೊಳ್ಳಬೇಕಿದೆ.
ಹೊಸತನವನ್ನು ಕಲಿಯುವ ಮನಸ್ಸು ಶಿಕ್ಷಕರಲ್ಲಿ ಬರಬೇಕಿದೆ. ಇದರಿಂದ "ದ್ಯಾಾರ್ಥಿಗಳನ್ನು ಸಮನ್ವಯಗೊಳಿಸಲು ಅನುಕೂಲವಾಗುತ್ತದೆ. ಆಗ ಶಿಕ್ಷಕ ತಾನೇ ಒಬ್ಬ ಪುಸ್ತಕ ಭಂಡಾರವಾಗುತ್ತಾಾನೆ. ಶಿಕ್ಷಕ ತನ್ನ ವೃತ್ತಿಿಯೇ ತಮ್ಮ ಆಸ್ತಿಿ ಎಂದು ತಿಳಿದಾಗ ಇದೆಲ್ಲಾಾ ಸಾಧ್ಯ. ಜೊತೆಗೆ ಇದು ಯಶಸ್ವಿಿಯಾಗುತ್ತದೆ. ಶಿಕ್ಷಕನಾದವನು ಜೀವಂತಿಕೆಯ, ಸೃಜನಶೀಲತೆಯ ಅವಕಾಶ ಮತ್ತು ಜವಾಬ್ದಾಾರಿಗಳನ್ನು ಹೆಚ್ಚು ಅರ್ಥೈಸಿಕೊಳ್ಳಬೇಕು. ಇದನ್ನು ತಿಳಿದುಕೊಂಡರೆ ವೃತ್ತಿಿ ಅಭಿಮಾನದ ಅವಕಾಶವೂ ಇಲ್ಲಿ ಹೆಚ್ಚುತ್ತದೆ. ಆತ್ಮಾಾವಲೋಕನ ಮಾಡಿಕೊಂಡು ಆರೋಗ್ಯಕರ ಸಮಾಜದ ನಿರ್ಮಾಾಣಕ್ಕೆೆ ಸಜ್ಜಾಾಗುವ ತುರ್ತು ಅವಶ್ಯಕತೆ ಎಂದಿಗಿಂತ ಈಗ ಹೆಚ್ಚಾಾಗಿದೆ.
published on 4th sept. 2019
.......................................