ಮಲೆನಾಡನ್ನು ಬೆಚ್ಚಿಿಬೀಳಿಸಿದೆ ಮಂಗನ ಕಾಯಿಲೆ
ಮಂಗನ ಕಾಯಿಲೆ ಹರಡದಂತೆ ವ್ಯಾಾಪಕ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜನರು ಆತಂಕ ಪಡುವ ಅಗತ್ಯವಿಲ್ಲ.
ಕಾಯಿಲೆ ಕುರಿತು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲು ಹಾಗೂ ತುರ್ತು ಕ್ರಮಕ್ಕಾಾಗಿ ಸಹಾಯ ಕೇಂದ್ರವನ್ನು ಆರಂಭಿಸಲಾಗಿದೆ. ಗ್ರಾಾಮದಲ್ಲಿ ಅಂಬುಲೆನ್ಸ್ ಸೇವೆ ದಿನದ 24ಗಂಟೆ ಕಾಲ ಲಭ್ಯವಿರಲಿದೆ. ಅಗತ್ಯ ಸಿಬ್ಬಂದಿ ನೇಮಕ ಮಾಡಲಾಗಿದೆ. ಸಾರ್ವಜನಿಕರು 104 ದೂರವಾಣಿ ಸಂಖ್ಯೆೆಗೆ ಕರೆ ಮಾಡಿ ತಮ್ಮ ಅಹವಾಲುಗಳನ್ನು ದಾಖಲಿಸಬಹುದಾಗಿದೆ ಮಂಗಗಳು ಸಾವಿಗೀಡಾಗಿರುವ ಪ್ರಕರಣಗಳು ಕಂಡು ಬಂದಲ್ಲಿ ತಕ್ಷಣ ಸಂಬಂಧಪಟ್ಟವರ ಗಮನಕ್ಕೆೆ ತರಬೇಕು. ಅಂತಹ ಕಡೆಗಳಲ್ಲಿ 50ಮೀಟರ್ ವ್ಯಾಾಪ್ತಿಿಯಲ್ಲಿ ಯಾರೂ ತೆರಳಬಾರದು. ಔಷಧಿ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ.
- ಜಿಲ್ಲಾಾಧಿಕಾರಿ ದಯಾನಂದ
ಮಲೆನಾಡನ್ನು ನಡುಗಿಸುವ ಹೆಮ್ಮಾಾರಿ ಮಂಗನ ಕಾಯಿಲೆ ಈ ಬಾರಿ ಅಬ್ಬರದಲ್ಲಿ ದಾಳಿ ಇಟ್ಟಿಿದೆ. ಮಲೆನಾಡಿನ ಗ್ರಾಾಮಸ್ಥರು ಮಂಗ ಎಂದರೆ ಬೆಚ್ಚಿಿಬೀಳುವ ಸ್ಥಿಿತಿ ನಿರ್ಮಾಣವಾಗಿದೆ. ಏಕೆಂದರೆ 15 ದಿನದಲ್ಲಿ ಇದಕ್ಕೆೆ ತುತ್ತಾಾದವರು ಆರು ಜನರು. ಇನ್ನೂ ಸುಮಾರು 75ರಷ್ಟು ಜನರು ಸಾಗರ, ಶಿವಮೊಗ್ಗ, ಮಣಿಪಾಲದ ಆಸ್ಪತ್ರೆೆಗಳಲ್ಲಿ ದಾಖಲಾಗಿದ್ದಾಾರೆ.
ಪ್ರತಿವರ್ಷ ಚಳಿಗಾಲ ಆರಂಭವಾಗುತ್ತಿಿದ್ದಂತೆಯೇ, ಬಿಲಿಲಿನ ಪ್ರಮಾಣ ಏರುತ್ತಿಿದ್ದಂತೆಯೇ ಮಂಗನ ಕಾಯಿಲೆ ಬಗ್ಗೆೆ ವರದಿಗಳು ಆರಂಭವಾಗುತ್ತವೆ. ಬಿಸಿಲು ಧಗಧಗಿಸುವ ವೇಳೆ ಇನ್ನಷ್ಟು ಉಲ್ಬಣಿಸಿರುತ್ತದೆ. ಇಷ್ಟರ ಮಧ್ಯೆೆ ಜಿಲ್ಲೆೆ ಮತ್ತು ತಾಲೂಕು ಮಟ್ಟದಲ್ಲಿ ಹತ್ತಾಾರು ಸಭೆ ನಡೆದಿರುತ್ತದೆ. ಕೇವಲ ಸಭೆ ನಡೆಸಿ ಜಾಗೃತಿ ಮೂಡಿಸುವುದಷ್ಟೇ ಈಗಿನ ಕೆಲಸವಾಗಿದೆ. ನಿರ್ದಿಷ್ಟ ಔಷಧಿ ಇಲ್ಲದಿರುವುದು ಈ ರೋಗ ಬಿಗಡಾಯಿಸಲು ಕಾರಣವಾಗಿದೆ.
ಪ್ರಸ್ತುತ ಸಾಗರ ತಾಲೂಕಿನ ಅರಳಗೋಡು ಪಂಚಾಯತ್ ವ್ಯಾಾಪ್ತಿಿಯ ವಾಟೆಮಕ್ಕಿಿ, ಆರೋಡಿ, ನೆಲ್ಲಿಮಕ್ಕಿಿ ಹಾಗೂ ಹೆಗ್ಗೋೋಡು ವ್ಯಾಾಪ್ತಿಿಯಲ್ಲಿ ಮಂಗನ ಕಾಯಿಲೆ ಲಕ್ಷಣಗಳು ಹೆಚ್ಚಿಿನದಾಗಿ ಕಂಡು ಬಂದಿದೆ. ಇಲ್ಲಿನ ಜನರು ಮನೆಯಿಂದ ಹೊರಬೀಳಲೂ ಆತಂಕಪಡುತ್ತಿಿದ್ದಾಾರೆ. ಮನೆಯಂಚಿನಲ್ಲೇ ಕಾಡಿರುವುದರಿಂದ, ತೋಟ, ಗದ್ದೆೆ, ಕೊಟ್ಟಿಿಗೆ ಪ್ರತಿ ಕೆಲಸಕ್ಕೂ ಕಾಡನ್ನೇ ಆಶ್ರಯಿಸುಬೇಕಿದೆ. ಪಕ್ಕದ ತೀರ್ಥಹಳ್ಳಿಿ ತಾಲೂಕಿಗೂ ಇದು ವ್ಯಾಾಪಿಸಿದೆ.
ಮಲೆನಾಡಿಗರು ಗಂಭೀರವಾಗಿ ಇದನ್ನು ಪರಿಗಣಿಸುವ ಸಂದರ್ಭ ಈಗ ಎದುರಾಗಿದೆ. ಕಾಡು ನಾಶವಾಗುತ್ತಿಿರುವ ಹಿನ್ನೆೆಲೆಯಲ್ಲಿ ಮಂಗಗಳು ನಾಡಿಗೆ ಬರುತ್ತಿಿವೆ. ಪಶ್ಚಿಿಮಘಟ್ಟದ ಪ್ರದೇಶದ ವ್ಯಾಾಪ್ತಿಿಯ ಪ್ರದೇಶಗಳು ಎಚ್ಚರಿಕೆಯಿಂದ ಇರಬೇಕಾದ ಸ್ಥಿಿತಿ ನಿರ್ಮಾಣವಾಗಿದೆ. ಪಕ್ಕದ ಜಿಲ್ಲೆೆ ಮತ್ತು ತಾಲೂಕಿನಲ್ಲೆೆಲ್ಲಾಾ ಈಗಾಗಲೇ ಇದರ ಬಗ್ಗೆೆ ಅರಿವು ಮೂಡಿಸುವ ಕೆಲಸ ನಡೆಯುತ್ತಿಿದೆ. ಈ ಹಿಂದೆ ಹೊನ್ನಾಾವರ ತಾಲೂಕಿನಲ್ಲೂ ಇದು ಕಾಣಿಸಿಕೊಂಡಿತ್ತು.
ಇಷ್ಟೊೊಂದು ವೈಜ್ಞಾಾನಿಕವಾಗಿ ಮುಂದುವರೆದಿರುವಾಗ ಈ ರೋಗಕ್ಕೆೆ ಇನ್ನೂ ಮದ್ದು ಕಂಡುಹಿಡಿಯಲು ಸಾಧ್ಯವಾಗಿಲ್ಲ. ಇನ್ನೂ ವಿಚಿತ್ರವೆಂದರೆ, ಇದರ ಸಂಶೋದನಯೆನ್ನು ಜಿಲ್ಲೆೆಯಲ್ಲಿ ನಡೆಸದೆ ಪುಣೆಯಲ್ಲಿ ನಡೆಸಲಾಗುತ್ತಿಿದೆ. ಸತ್ತ ಮಂಗನ ಬಗ್ಗೆೆ ಸಂಶೋಧನೆ ಪುಣೆಯಲ್ಲಾಾದರೆ ಅದರ ವರದಿ ಬರಲು ತಿಂಗಳೇ ಕಳೆಯುತ್ತದೆ. ಅಲ್ಲಿಯವರೆಗೆ ಇದರ ಬಾಧೆಗೆ ಒಳಗಾದವರ ಗತಿ ಏನು, ಈ ಬಗ್ಗೆೆ ಜನಪ್ರತಿನಿಧಿಗಳು ಏಕೆ ಗಂಭೀರವಾಗಿ ಯೋಚಿಸುತ್ತಿಿಲ್ಲ. ಇದನ್ನೆೆಲ್ಲ ನೋಡಿದಾಗ ಈವರೆಗಿನ ಸರ್ಕಾರಗಳು, ಮಲೆನಾಡಿನ ರಾಜಕಾರಣಿಗಳು ಇದರ ನಿರ್ಮೂಲನೆ ಬಗ್ಗೆೆ ನಿರ್ಲಕ್ಷ್ಯ ವಹಿಸಿರುವುದು ಗೋಚರವಾಗುತ್ತದೆ.
ಪೋಲಿಯೋ ನಿರ್ಮೂಲನೆ ಮಾಡಿಯಾಗಿದೆ. ಇದರಂತೆ ಇನ್ನೂ ಹತ್ತಾಾರು ರೋಗಗಳು ಈಗ ನಾಪತ್ತೆೆಯಾಗಿವೆ. ಆದರೆ 60 ವರ್ಷದ ಮಂಗನ ಕಾಯಿಲೆ ಮಾತ್ರ ನಿರ್ಮೂಲನೆಯಾಗಿಲ್ಲ. ಇದಕ್ಕೆೆ ಕಾರಣವೇನೆಂದರೆ, ಇದು ಕೇವಲ ಮಲೆನಾಡಿನ ಜನರ ಸಮಸ್ಯೆೆಯಾಗಿರುವುದು. ಎರಡನೆಯದಾಗಿ, ನಿರ್ದಿಷ್ಟ ಕಾಲದಲ್ಲಿ ಮಾತ್ರ ಕಾಣಿಸಿಕೊಳ್ಳುವುದರಿಂದ ವಿಶೇಷ ಗಮನವನ್ನು ಸರ್ಕಾರ ನೀಡುತ್ತಿಿಲ್ಲ. ಮಂಗನ ಕಾಯಿಲೆ ಪ್ರತಿ ವರ್ಷ ಬಂದು ನಾಲ್ಕಾಾರು ತಿಂಗಳಲ್ಲಿ ಹಲವರನ್ನು ಬಲಿ ಪಡೆಯುತ್ತಿಿದ್ದರೂ ಗಮನಹರಿಸುವವರಿಲ್ಲ ಎಂದರೆ ಇದರ ಗಂಭೀರತೆ ಇನ್ನೂ ಅರ್ಥವಾಗಿಲ್ಲ ಎಂದೇ ಅರ್ಥೈಸಬೇಕಾಗುತ್ತದೆ.
ಇನ್ನು ಜಿಲ್ಲಾಾಮಟ್ಟದ ಅಧಿಕಾರಿಗಳು ಸಭೆ ನಡೆಸಿ ಜನಜಾಗೃತಿ ಮೂಡಿಸುತ್ತಿಿದ್ದಾಾರೆ. ಜನರಿಗೆ ಕರಪತ್ರ ಹಂಚಿ ಅರಿವು ಮೂಡಿಸುವುದು, ಲಸಿಕೆ ಹಾಕುವುದು, ಕಾಡಿಗೆ ತೆರಳುವವರಿಗೆ ಉಣ್ಣೆೆ ತಾಗದಂತೆ ಹಚ್ಚಿಿಕೊಳ್ಳುವ ಡಿಎಂಪಿ ತೈಲ ವಿತರಿಸುವುದು ನಡೆಯುತ್ತಿಿದೆ. ಆದರೂ ಇದರ ನಿಯಂತ್ರಣ ಸಾಧ್ಯವಾಗುತ್ತಿಿಲ್ಲ.
ಜಿಲ್ಲೆೆಗೆ ಬಂದ ಜಿಲ್ಲಾಾಧಿಕಾರಿಗಳೆಲ್ಲ ಭೇಟಿ ನೀಡಿ ಅಲ್ಲಿನ ಪರಿಸ್ಥಿಿತಿ, ಜನರ ಅಹವಾಲು ಕೇಳಿದ್ದಾಾರೆ. ಆದರೂ ಸರ್ಕಾರ ಕಣ್ತೆೆರೆದಿಲ್ಲ. ಇಲ್ಲಿ ಸಂಶೋಧನಾ ಕೇಂದ್ರ ತೆರೆಯುವ ಬಗ್ಗೆೆ ಹಲವು ಬಾರಿ ಪ್ರಸ್ತಾಾವನೆ ಹೋದರೂ ಕಣ್ತೆೆರೆದು ನೋಡಿಲ್ಲ. ಆದರೆ ಇದೇ ಮೊದಲ ಬಾರಿಗೆ ಶಿವಮೊಗ್ಗದ ಮೆಗ್ಗಾಾನ್ ಸರ್ಕಾರಿ ಆಸ್ಪತ್ರೆೆಯಲ್ಲಿ ಸಂಶೋಧನಾ ಕೇಂದ್ರ ತೆರೆಯುವ ಬಗ್ಗೆೆ ಸರ್ಕಾರ ಮಾತನ್ನಾಾಡಿದೆ.
ಒಟ್ಟಿಿನಲ್ಲಿ, ಮಂಗನ ಕಾಯಿಲೆಯನ್ನು ಸರ್ಕಾರಗಳು ನಿರ್ಲಕ್ಷಿಸದೆ ಸಂಶೋಧನೆ ಕೇಂದ್ರ, ವಿಶೇಷ ಆಸ್ಪತ್ರೆೆ ತೆರೆಯುವ ಕೆಲಸ ಮಾಡುವುದು ಅನಿವಾರ್ಯವಾಗಿದೆ. ಏಕೆಂದರೆ, ಪ್ರತಿವರ್ಷ ಜನರು ಸಾಯುತ್ತಿಿದ್ದಾಾರೆ. ಜೊತೆಗೆ ಅವಶ್ಯಕ ಔಷಧಿಯನ್ನು ಅತಿ ಕಡಿಮೆ ದರದಲ್ಲಿ ಅಥವಾ ಉಚಿತವಾಗಿ ಜನರಿಗೆ ತಲುಪಿಸುವ ಕೆಲಸವನ್ನೂ ಮಾಡಬೇಕಿದೆ. ಲಯನ್ಸ್, ರೋಟರಿಯಂತಹ ಸೇವಾಮನೋಭಾವದ ವಿವಿಧ ಸಂಘ-ಸಂಸ್ಥೆೆಗಳು ಇದರಲ್ಲಿ ಕೈಜೋಡಿಸಬೇಕಿದೆ.
ಮಂಗನ ಕಾಯಿಲೆ 1957ರಲ್ಲಿ ಮೊಟ್ಟಮೊದಲ ಬಾರಿಗೆ ಸೊರಬ ತಾಲೂಕಿನ ಕ್ಯಾಾಸನೂರಿನಲ್ಲಿ ಪತ್ತೆೆಯಾಗಿತ್ತು. ಅಲ್ಲಿಂದೀಚೆಗೆ ಇದರ ಬಗ್ಗೆೆ ಸಾಕಷ್ಟು ವಿದೇಶಿ ತಜ್ಞರು ಸಹ ಬಂದು ಚರ್ಚಿಸಿ ಹೋದರು. ಆದರೆ ಸಂಶೋಧನಾಲಯವನ್ನು ಸ್ಥಾಾಪಿಸಲು ಯಾರೂ ಮುಂದಾಗಲಿಲ್ಲ. ಕೇವಲ ಗ್ರಾಾಮಸ್ಥರಲ್ಲಿ ಅರಿವು ಮೂಡಿಸುವುದಷ್ಟೇ ಸದ್ಯದ ಕೆಲಸವಾಗಿದೆ. 2012ರಲ್ಲಿ 92, 2013ರಲ್ಲಿ 3, 2014ರಲ್ಲಿ ಜಿಲ್ಲೆೆಯಲ್ಲಿ 147 ಮಂಗನ ಕಾಯಿಲೆ ಪ್ರಕರಣಗಳು, 2015ರಲ್ಲಿ 41ಪ್ರಕರಣಗಳು, 2016ರಲ್ಲಿ 13, 2017ರಲ್ಲಿ 37 ಪ್ರಕರಣಗಳು ಪತ್ತೆೆಯಾಗಿತ್ತು. 2018ರಲ್ಲಿ ಒಬ್ಬ ವ್ಯಕ್ತಿಿ ತೀರ್ಥಹಳ್ಳಿಿ ತಾಲೂಕಿನಲ್ಲಿ ಸಾವನ್ನಪ್ಪಿಿದ್ದಾಾನೆ. ಕಾಯಿಲೆ ಪತ್ತೆೆಯಾದಂದಿನಿಂದ ಇಲ್ಲಿಯವರೆಗೆ ನೂರಾರು ಜನರು ಸತ್ತಿಿದ್ದಾಾರೆ. ಈ ವರ್ಷ 6 ಜನರು ಸಾವನ್ನಪ್ಪಿಿದ್ದಾಾರೆ.
jAN 7
,,,,,,,,,,,,,,,,,,,,,,,,,
No comments:
Post a Comment